ಗೆಲುವಿನ ವಿಜಯೋತ್ಸವದಲ್ಲಿ ಜಾರಿ ಬಿದ್ದ ರಷ್ಯಾ ಅಧ್ಯಕ್ಷ ... ಮೈದಾನದಲ್ಲೇ ಆಯತಪ್ಪಿ ಕೆಳಬಿದ್ದ ವ್ಲಾಡಿಮಿರ್! - ರಷ್ಯಾ ಅಧ್ಯಕ್ಷ ಪುಟಿನ್
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉತ್ತಮ ಕ್ರೀಡಾಪಟು . ಈಜು, ಅಥ್ಲೆಟಿಕ್ಸ್ನಲ್ಲಿ ಗಮನಸೆಳೆದಿರುವ ಪುಟಿನ್ ಇದೀಗ ಐಸ್ ಹಾಕಿಯಲ್ಲೂ ಹಿಂದೆ ಬಿದ್ದಿಲ್ಲ. ಸೋಚಿಯಲ್ಲಿ ನಡೆದ ಹಿಮ ಹಾಕಿ ಪಂದ್ಯದಲ್ಲಿ ರಷ್ಯಾ ಅಧ್ಯಕ್ಷರು ಎಂಟು ಗೋಲು ಬಾರಿಸಿ ತಂಡಕ್ಕೆ ಗೆಲುವು ದಾಖಲು ಮಾಡಿಕೊಂಡುವ ಮೂಲಕ ಅಚ್ಚರಿ ಮೂಡಿಸಿದರು. ಇನ್ನು ತಂಡ ಗೆಲುತ್ತಿದ್ದಂತೆ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಪುಟಿನ್ ಆಯತಪ್ಪಿ ಕೆಳ ಬಿದ್ದಿದ್ದಾರೆ. ಅವರಿಗೆ ಯಾವುದೇ ರೀತಿಯ ಗಾಯವಾಗಿಲ್ಲ. ತಕ್ಷಣ ಮೇಲೆ ಎದ್ದು ಅಭಿಮಾನಿಗಳತ್ತ ಕೈ ತೋರಿಸಿದ್ದಾರೆ.
Last Updated : May 12, 2019, 8:59 AM IST