ಸೋಹನಾ ವೆಡ್ಸ್ ವಿನಯ್.... ರಾಮೋಜಿ ಮೊಮ್ಮಗಳ ಅದ್ಧೂರಿ ವಿವಾಹ ಮಹೋತ್ಸವ
ರಾಮೋಜಿ ಗ್ರೂಪ್ ಸಂಸ್ಥೆಯ ಮುಖ್ಯಸ್ಥ ರಾಮೋಜಿ ರಾವ್ ಅವರ ಮೊಮ್ಮಗಳ ವಿವಾಹ ಮಹೋತ್ಸವ ಇಂದು ಅದ್ಧೂರಿಯಾಗಿ ನಡೆಯಿತು. ರಾಮೋಜಿ ಅವರ ಪುತ್ರ ಸುಮನ್ ಹಾಗೂ ವಿಜಯೇಶ್ವರಿ ದಂಪತಿಯ ಪುತ್ರಿ ಕೀರ್ತಿ ಸೋಹನಾ, ವಿನಯ್ ಅವರನ್ನು ಬಾಳಸಂಗಾತಿಯಾಗಿ ವರಿಸಿದರು. ಅತ್ಯಂತ ಸುಂದರವಾಗಿ ನಿರ್ಮಿಸಲಾಗಿದ್ದ ಮಂಟಪದಲ್ಲಿ ಸ್ವತಃ ರಾಮೋಜಿರಾವ್ ಹಾಗೂ ರಮಾದೇವಿ ದಂಪತಿ ತೆಲುಗು ಸಂಪ್ರದಾಯದಂತೆ ಸಾವಿರಾರು ಗಣ್ಯರ ಮುಂದೆ ಕನ್ಯಾದಾನ ನೆರವೇರಿಸಿದರು. ಅತ್ಯಂತ ವೈಭವೋಪೇತವಾಗಿ ನಡೆದ ಈ ವಿವಾಹ ಮಹೋತ್ಸವದಲ್ಲಿ ಚಿತ್ರರಂಗ, ರಾಜಕೀಯ ಕ್ಷೇತ್ರ ಹಾಗೂ ಉದ್ಯಮ ಜಗತ್ತಿನ ಗಣ್ಯಾತಿಗಣ್ಯರು, ಚಿತ್ರ ತಾರೆಯರು ಭಾಗವಹಿಸಿದ್ದರು.