ಹೆರುವ ತಾಯಿನೂ ಹೆಣ್ಣೆಪಾ, ಅಷ್ಟು ಅಸಹ್ಯ ವಿಡಿಯೋ ಮಾಡ್ತೀರಾ.. ಪುರುಷನ ರಾಕ್ಷಸಿ ಕೃತ್ಯಕ್ಕೂ ಮಹಿಳೆಯನ್ನೇ ದೂಷಿಸ್ತೀರಿ.. - anjali nimbalkar talk about rape case
ನಾನು ಒಂದು ಹೆಣ್ಣು ಮಗುವಿನ ತಾಯಿ. ಈ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಅಭದ್ರತೆ ಕಾಡ್ತಾಯಿದೆ. ಒಂದು ಹೆಣ್ಣಿನ ಮೇಲೆ ಅತ್ಯಾಚಾರ ನಡೆಸುವ ರಾಕ್ಷಸರು, ವಿಕೃತರ ತಾಯಿ ಕೂಡ ಹೆಣ್ಣು ಅನ್ನೋದನ್ನ ಮರೆತರೇ ಹೇಗೆ ಅಂತಾ ಕೆಜಿಎಫ್ ಕಾಂಗ್ರೆಸ್ ಶಾಸಕಿ ರೂಪಕಲಾ ಗದ್ಗದಿತರಾದರು. ರೇಪ್ ಅನ್ನೋ ಪದ ಸರಳವಾಗಿ ಬಳಸ್ತೀರಿ. ಆದರೆ, ಸಂತ್ರಸ್ತರ ನೋವು ಯಾರಿಗೂ ಬೇಡ ಅಂದರು ಶಾಸಕಿ ಅಂಜಲಿ ನಿಂಬಾಳ್ಕರ್. ಮಹಿಳೆಯರನ್ನ ದೇವರೆಂದು ಪೂಜಿಸ್ತೀರಿ. ನಮ್ಗೇ ಆ ಪೂಜೆ ಬೇಡ. ಮಹಿಳೆಯರಿಗೆ ಸುರಕ್ಷತೆ ಬೇಕು ಅಂತಾ ಜಯನಗರ ಎಂಎಲ್‌ಎ ಸೌಮ್ಯರೆಡ್ಡಿ ಹೇಳಿದರು. ಮಹಿಳಾ ಶಾಸಕಿಯರ ಮಾತಿಗೆ ಇಡೀ ಸದನ ಮೌನವಾಗಿತ್ತು..
Last Updated : Sep 22, 2021, 9:34 PM IST