ರೈಲಿನ ಮೇಲೇರಿ ಸೆಲ್ಫಿ ತೆಗೆಯಲು ಹೋಗಿ ಸುಟ್ಟು ಭಸ್ಮವಾದ ಯುವಕ
ಗಜಪತಿ (ಒಡಿಶಾ): ರೈಲಿನ ಮೇಲೇರಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದ ಯುವಕನೋರ್ವ ವಿದ್ಯುತ್ ತಂತಿ ತಗುಲಿ ಸುಟ್ಟು ಭಸ್ಮವಾಗಿದ್ದಾನೆ. ಒಡಿಶಾದ ಗಜಪತಿಯ ಪರಲಖೇಮುಂಡಿ ರೈಲ್ವೆ ನಿಲ್ದಾಣದಲ್ಲಿ ಈ ದುರ್ಘಟನೆ ಸಂಭವಿಸಿದೆ. ಯುವಕನ ಈ ಹುಚ್ಚಾಟಕ್ಕೆ ರೈಲಿನ ಬೋಗಿಯೊಂದಕ್ಕೆ ಸಹ ಬೆಂಕಿ ಹೊತ್ತಿಕೊಂಡಿದೆ. ಈ ವಿಷಯ ತಿಳಿಯುತ್ತಿದ್ದಂತೆ ರೈಲ್ವೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.