ಛತ್ರಪತಿ ಶಿವಾಜಿ, ನನ್ನ ಪೋಷಕರ ಹೆಸರಿನ ಮೇಲೆ ಪ್ರತಿಜ್ಞಾವಿಧಿ ಸ್ವೀಕರಿಸಿರುವೆ: ತಪ್ಪಾಗಿದ್ರೆ ಮತ್ತೊಮ್ಮೆ ಮಾಡುವೆ!
ಮುಂಬೈ: ಮಹಾರಾಷ್ಟ್ರದಲ್ಲಿ ಹೊಸದಾಗಿ ಮೈತ್ರಿಕೂಟ ಸರ್ಕಾರ ರಚನೆ ಆಗಿದ್ದು, ಶಿವಸೇನೆಯ ಉದ್ಧವ್ ಠಾಕ್ರೆ ಇಂದು ವಿಶ್ವಾಸಮತ ಸಾಬೀತು ಮಾಡಿದ್ದಾರೆ. ಈ ವೇಳೆ ಅವರು ಛತ್ರಪತಿ ಶಿವಾಜಿ ಮಹಾರಾಜ್ ಹಾಗೂ ನನ್ನ ಪೋಷಕರ ಮೇಲೆ ಪ್ರಮಾಣ ವಚನ ಸ್ವೀಕಾರ ಮಾಡಿದ್ದು ನಿಜ. ಒಂದು ವೇಳೆ ಅದು ತಪ್ಪು ಅನ್ನುವುದಾದರೆ ಮತ್ತೊಂದು ಸಲ ಮಾಡುವೆ ಎಂದು ಪ್ರತಿಪಕ್ಷಕ್ಕೆ ಟಾಂಗ್ ನೀಡಿದ್ದಾರೆ. ಸದನದಲ್ಲಿ ಹಾಜರಿದ್ದ ಶಾಸಕರ ಪೈಕಿ ಸಮ್ಮಿಶ್ರ ಸರ್ಕಾರದ ಪರ 169 ಶಾಸಕರು ಬೆಂಬಲ ವ್ಯಕ್ತಪಡಿಸಿದ್ದಾರೆ.