ನಾರಿ ಮುನಿದರೆ ಮಾರಿ.. ಕಿರುಕುಳ ನೀಡುತ್ತಿದ್ದವರಿಗೆ ಒಂಟಿಯಾಗಿ ಥಳಿಸಿದ ಯುವತಿ.. - Woman beating young men for molesting
ಕಾನ್ಪುರ (ಉತ್ತರ ಪ್ರದೇಶ): ಕಿರುಕುಳ ನೀಡಿದ ಪುಂಡರಿಗೆ ಯುವತಿಯೊಬ್ಬಳು ಒಂಟಿಯಾಗಿ ಥಳಿಸಿ ಪಾಠ ಕಲಿಸಿರುವ ಘಟನೆ ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಜನರ ಮುಂದೆಯೇ ರಸ್ತೆ ಮಧ್ಯೆ ಯುವಕರಿಗೆ ಹೊಡೆದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯುವತಿಯ ಧೈರ್ಯಕ್ಕೆ ನೆಟ್ಟಿದರಿಂದ ಮೆಚ್ಚುಗೆ ವ್ಯಕ್ತವಾಗಿದೆ.