ಕೊರೊನಾ ವಾರಿಯರ್ಸ್ಗೆ ಪ.ಬಂಗಾಳ ಸರ್ಕಾರ ಗೌರವ... ಜುಲೈ 1ರಂದು ಸರ್ಕಾರಿ ರಜೆ ಘೋಷಣೆ!
ಕೋಲ್ಕತ್ತಾ: ಮಹಾಮಾರಿ ಕೊರೊನಾ ವಿರುದ್ಧ ವಾರಿಯರ್ಸ್ ಆಗಿ ಹೋರಾಡುತ್ತಿರುವ ವೈದ್ಯರು, ನರ್ಸ್ ಹಾಗೂ ಇತರೆ ಸಿಬ್ಬಂದಿಗೆ ಗೌರವ ನೀಡಲು ಪಶ್ಚಿಮ ಬಂಗಾಳ ಸರ್ಕಾರ ನಿರ್ಧರಿಸಿದೆ. ಅವರಿಗೆ ಗೌರವ ನೀಡುವ ಉದ್ದೇಶದಿಂದ ಜುಲೈ 1ರಂದು ಸರ್ಕಾರಿ ರಜೆ ಘೋಷಣೆ ಮಾಡಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆದೇಶ ಹೊರಡಿಸಿದ್ದಾರೆ. ಇದೇ ವೇಳೆ ಕೇಂದ್ರದ ಬಳಿ ಮನವಿ ಮಾಡಿಕೊಂಡಿದ್ದು, ಈ ದಿನದಂದು ರಾಷ್ಟ್ರೀಯ ರಜೆ ನೀಡುವಂತೆ ಕೋರಿದ್ದಾರೆ. ವಿಶೇಷವೆಂದರೆ 1 ಜುಲೈ ರಾಷ್ಟ್ರೀಯ ವೈದ್ಯರ ದಿನವಾಗಿದೆ.