ಮಹಾತ್ಮನಿಗೂ ಜಾರ್ಖಂಡ್ನ ರಾಮಗಢಕ್ಕೂ ಇದೆ ನಂಟು... ಇಲ್ಲಿಯೂ ಇದೆ ಬಾಪೂ ಸಮಾಧಿ!
1948ರಂದು ಬಾಪೂ ಇಹಲೋಕ ತ್ಯಜಿಸಿದ್ದು, ಅವರ ಅಸ್ಥಿಯ ಒಂದು ಭಾಗವನ್ನು ಜಾರ್ಖಂಡ್ನ ರಾಮಗಢಕ್ಕೂ ತರಲಾಯಿತು. ನಂತರ ದಾಮೋದರ್ ನದಿಯ ದಡದಲ್ಲಿ ಅವರ ಸಮಾಧಿಯನ್ನು ನಿರ್ಮಾಣ ಮಾಡಲಾಯಿತು. ಅದನ್ನು ಈಗ ಗಾಂಧಿ ಘಾಟ್ ಎಂದೇ ಕರೆಯಲಾಗುತ್ತದೆ. ಈ ವರ್ಷ ಗಾಂಧೀಜಿಯ 71ನೇ ಪುಣ್ಯಸ್ಮರಣೆ ಆಚರಿಸಲಾಗುತ್ತಿದೆ. ಬಾಪೂ ತೆರಳಿ 7 ದಶಕಗಳೇ ಕಳೆದರೂ ಅವರ ನೆನಪುಗಳು ಮಾತ್ರ ಇನ್ನೂ ಅಚ್ಚಳಿಯದೆ ಉಳಿದಿವೆ.