ಭಾರಿ ಮಳೆಗೆ ಕೊಚ್ಚಿಹೋದ ಸೇತುವೆ: ಹರಿವ ನೀರಲ್ಲೇ ನದಿ ದಾಟಿದ ಗರ್ಭಿಣಿ - ತಾತ್ಕಾಲಿಕ ಸೇತುವೆ
ಹೈದರಾಬಾದ್: ತೆಲಂಗಾಣದ ಗುಂಡಲಾದಲ್ಲಿ ಭಾರಿ ಮಳೆಯಿಂದ ಹಳ್ಳ ದಾಟುವ ಸೇತುವೆ ಕೊಚ್ಚಿಹೋಗಿದೆ. ಇದೇ ವೇಳೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಗರ್ಭಿಣಿಯನ್ನ ಆಸ್ಪತ್ರೆಗೆ ತಲುಪಲು ಹೆಗಲ ಮೇಲೆ ಹೊತ್ತುಕೊಂಡು, ನದಿ ದಾಟಿಸಿದ ಪ್ರಸಂಗ ನಡೆದಿದೆ. ನಿರಂತರ ಮಳೆಯಿಂದಾಗಿ ನದಿ ದಾಟಲು ಇದ್ದ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿತ್ತು. ಹೀಗಾಗಿ ಆಸ್ಪತ್ರೆ ತಲುಪಲು ಗರ್ಭಿಣಿ ಸಂಕಷ್ಟ ಪಡಬೇಕಾಯಿತು. ಅಂತೂ ಹರಸಾಹಸ ಮಾಡಿ ಮಹಿಳೆಯನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರೀಗ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ