ದೇಶದ ಮೊದಲ ಕೊರೊನಾ ಲಸಿಕೆ 'ಕೊವ್ಯಾಕ್ಸಿನ್' ಸಿದ್ಧ: ಈಟಿವಿ ಜೊತೆ ಭಾರತ್ ಬಯೋಟೆಕ್ ಚೇರ್ಮನ್ ಮಾತು!
ಹೈದರಾಬಾದ್: ಹೈದರಾಬಾದ್ ಮೂಲದ ಜೈವಿಕ ತಂತ್ರಜ್ಞಾನ ಕಂಪನಿ ಭಾರತ್ ಬಯೋಟೆಕ್ ಕೋವಿಡ್ ವಿರುದ್ಧ ಹೋರಾಡುವ ದೇಶದ ಮೊದಲ ಲಸಿಕೆ ಕೊವ್ಯಾಕ್ಸಿನ್ ಅಭಿವೃದ್ಧಿಪಡಿಸಿದ್ದು, ಮೊದಲ ಹಾಗೂ ಎರಡನೇ ಹಂತದ ಮಾನವ ಪ್ರಯೋಗ ನಡೆಸಲಿದೆ. ಇದೇ ವಿಷಯವಾಗಿ ಈಟಿವಿ ಭಾರತ್ ಜೊತೆ ಭಾರತ್ ಬಯೋಟೆಕ್ನ ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಕೃಷ್ಣ ಎಲಾ ಮಾತನಾಡಿದ್ದು, ಲಸಿಕೆ ಕಂಡು ಹಿಡಿಯುವಲ್ಲಿ ತಾವು ಎದುರಿಸಿದ ಸವಾಲುಗಳು ಸೇರಿದಂತೆ ಮಹತ್ವದ ವಿಷಯಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.