ಕಮೋಡ್ನಲ್ಲಿ ನೋಟುಗಳನ್ನ ಹಾಕಿ ಫ್ಲಶ್ ಮಾಡಿದ ಭೂಪ.. ವಿಡಿಯೋ ವೈರಲ್
ಇಂದೋರ್ (ಮಧ್ಯಪ್ರದೇಶ): ಯುವಕನೊಬ್ಬ ಕೋಣೆಯ ಸುತ್ತಾ ಗುಲಾಬಿ ಬಣ್ಣದ ನೋಟುಗಳನ್ನು ಎಸೆಯುತ್ತಿರುವ, ನೋಟುಗಳ ಮೇಲೆ ಮಲಗಿರುವ, ಕೊನೆಯಲ್ಲಿ ಅವುಗಳನ್ನು ಶೌಚಾಲಯದ ಕಮೋಡ್ನಲ್ಲಿ ಹಾಕಿ ಫ್ಲಶ್ ಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ. ಸ್ಥಳೀಯರು ಈ ಕೋಣೆಯನ್ನು ಮಧ್ಯಪ್ರದೇಶದ ಇಂದೋರ್ನ ಹೋಟೆಲ್ ಎಂದು ಗುರುತಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಆ ನೋಟುಗಳು ನಕಲಿಯೋ ಅಸಲಿಯೋ, ಆತನದ್ದೋ ಇನ್ಯಾರದ್ದೋ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಇಂದೋರ್ನ ಡಿಐಜಿ ಹರಿನಾರಾಯಣ್ ಚಾರಿ ಮಿಶ್ರಾ ಹೇಳಿದ್ದಾರೆ.