ಮನಕಲುಕುವ ದೃಶ್ಯ: ಪುಟ್ಟ ಕಂದಮ್ಮಗಳನ್ನು ಒಂದೇ ಕೈಯಲ್ಲೆತ್ತಿ ಟ್ರಕ್ ಹತ್ತುವ ಕಾರ್ಮಿಕರು! - ವಲಸೆ ಕಾರ್ಮಿಕರು
ಇದು ಅಸಹಾಯಕತೆ ಮತ್ತು ಅನಿವಾರ್ಯತೆ. ಈ ಒಂದು ದೃಶ್ಯಕ್ಕೆ ದೇಶದಲ್ಲಿ ವಲಸೆ ಕಾರ್ಮಿಕರ ಸದ್ಯದ ಪರಿಸ್ಥಿತಿಯನ್ನು ಧುತ್ತೆಂದು ನಮ್ಮೆದುರು ಕಡೆದು ನಿಲ್ಲಿಸುವ ಸಾಮರ್ಥ್ಯವಿದೆ. ದಿನದ ದುಡಿಮೆ, ದಿನದ ಊಟ. ತುತ್ತು ಚೀಲವನ್ನು ತುಂಬಿಸಲು ಹುಟ್ಟಿದೂರು ಬಿಟ್ಟು ಬೇರೆ ರಾಜ್ಯಗಳಿಗೆ ಹೋಗಿರುವ ಜನರ ಸಂಕಷ್ಟವಿದು. ಈಗ ತಮ್ಮೂರುಗಳಿಗೆ ಹೋಗುವ ಭಗೀರಥ ಪ್ರಯತ್ನ ಅವರದ್ದು. ಇದಕ್ಕೆ ಕಾರಣ ಕೊರೊನಾ ಕ್ರೌರ್ಯ. ದೇಶದಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರು ತವರು ನೆಲ ಸೇರಲಾಗದೆ ವಿಲವಿಲ ಒದ್ದಾಡುತ್ತಿದ್ದಾರೆ. ನೀವು ನೋಡುತ್ತಿರುವ ವಿಡಿಯೋ ಸೆರೆ ಸಿಕ್ಕಿರೋದು ಛತ್ತೀಸ್ಗಢದ ರಾಜಧಾನಿ ರಾಯ್ಪುರದಲ್ಲಿ. ಇಲ್ಲಿ ಕಾರ್ಮಿಕರು ತಮ್ಮ ಮನೆ ಸೇರಲು ಲಾರಿ, ಟ್ರಕ್ಗಳನ್ನೇರುತ್ತಿದ್ದಾರೆ. ಈ ವೇಳೆ ಪುಟ್ಟ ಪುಟ್ಟ ಕಂದಮ್ಮಗಳನ್ನೆತ್ತಿಕೊಂಡು ಲಾರಿ ಮೇಲೆ ಒಂದೇ ಕೈಯಲ್ಲೆತ್ತಿ ತಾವೂ ಮೇಲೇರುತ್ತಿದ್ದಾರೆ. ವಿಡಿಯೋ ಮನಕಲುಕುವಂತಿದೆ.!
Last Updated : May 12, 2020, 12:30 PM IST