ಜುವೆಲ್ಲರಿ ಶಾಪ್ಗೆ ಬಂದ್ರು, ಸ್ಯಾನಿಟೈಸರ್ಸ್ನಿಂದ ಕೈತೊಳೆದು, ಪಿಸ್ತೂಲ್ನಿಂದ ಬೆದರಿಸಿ ದರೋಡೆ ಮಾಡಿದ್ರು... ವಿಡಿಯೋ - ಸಿಸಿಟಿವಿಯಲ್ಲಿ ದೃಶ್ಯಾವಳಿ ಸೆರೆ
ಅಲಿಘಡ: ಗ್ರಾಹಕರಂತೆ ಜುವೆಲ್ಲರಿ ಶಾಪ್ಗೆ ಬಂದಿರುವ ಮೂವರು ದರೋಡೆಕೋರರು, ಮಾಲೀಕರಿಂದ ಸ್ಯಾನಿಟೈಸರ್ಸ್ ಹಾಕಿಸಿಕೊಂಡು ಕೈ ತೊಳೆದುಕೊಂಡಿದ್ದಾರೆ. ಇದಾದ ಮರುಕ್ಷಣವೇ ತಮ್ಮ ಬಳಿ ಇದ್ದ ಪಿಸ್ತೂಲ್ ಹೊರತೆಗೆದು ಮಾಲೀಕರನ್ನ ಬೆದರಿಸಿ ಚಿನ್ನಾಭರಣ ಹಾಗೂ ಹಣ ದರೋಡೆ ಮಾಡಿ ಪರಾರಿಯಾಗಿದ್ದಾರೆ.ಇದರ ವಿಡಿಯೋ ಇದೀಗ ವೈರಲ್ ಆಗಿದ್ದು, ಉತ್ತರಪ್ರದೇಶದ ಅಲಿಘಡನಲ್ಲಿ ಈ ಪ್ರಕರಣ ನಡೆದಿದೆ.