ಉಜ್ಜೈನಿಯ ಮಹಾಕಾಲ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ - ಮಹಾಕಾಲ್ ದೇವಸ್ಥಾನದಲ್ಲಿ ವಿಶೇಷ ಅಭಿಷೇಕ
ಉಜ್ಜೈನ್(ಮಧ್ಯ ಪ್ರದೇಶ): ಇಂದು ಶ್ರಾವಣದ ಎರಡನೇ ಸೋಮವಾರ. ಉಜೈನ್ನ ಮಹಾಕಾಲ ದೇವಸ್ಥಾನದಲ್ಲಿ ಪಂಚಾಮೃತ, ಹಾಲು, ಮೊಸರು, ತುಪ್ಪ, ಸಕ್ಕರೆ, ಜೇನುತುಪ್ಪ ಮತ್ತು ಪರಿಮಳಯುಕ್ತ ದ್ರವ್ಯಗಳಿಂದ ಬಾಬಾ ಮಹಾಕಾಲನಿಗೆ ಅಭಿಷೇಕ ಮಾಡುತ್ತಿದ್ದಾರೆ. 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಬಾಬಾ ಮಹಾಕಾಲನಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ಬಾಬಾ ಮಹಾಕಾಲನ ದರ್ಶನ ಪಡೆಯಲು ಕೆಲ ಭಕ್ತರು ದೇವಸ್ಥಾನಕ್ಕೆ ಬರುತ್ತಿದ್ದು, ಅನೇಕರು ಆನ್ಲೈನ್ ದರ್ಶನ ಪಡೆಯತ್ತಿದ್ದಾರೆ.