ಪ್ರತಿಭಟನೆ ಹಿಂಪಡೆದ ಕೆಲ ರೈತ ಸಂಘಟನೆಗಳು: ಸ್ಥಳದಿಂದ ಗಂಟು-ಮೂಟೆ ಕಟ್ಟಿದ ರೈತರು!
ನವದೆಹಲಿ: ನಿನ್ನೆ ದೆಹಲಿಯಲ್ಲಿ ನಡೆದ ಟ್ರ್ಯಾಕ್ಟರ್ ಪರೇಡ್ ಹಿಂಸಾಚಾರ ರೂಪ ಪಡೆದುಕೊಂಡಿದ್ದು, ಇದಕ್ಕೆ ಎಲ್ಲಡೆಯಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಎರಡು ರೈತ ಸಂಘಟನೆಗಳು ಪ್ರತಿಭಟನೆ ಹಿಂಪಡೆದುಕೊಳ್ಳುವುದಾಗಿ ಘೋಷಣೆ ಮಾಡಿವೆ. ಹೀಗಾಗಿ ಪ್ರತಿಭಟನಾ ಸ್ಥಳದಿಂದ ರೈತರು ಗಂಟು-ಮೂಟೆ ಕಟ್ಟುತ್ತಿದ್ದಾರೆ. ದೆಹಲಿಯ ಚಿಲ್ಲಾ ಗಡಿಯಲ್ಲಿ ಕಳೆದ 58 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ರೈತರು ಇದೀಗ ತಮ್ಮ ಸಾಮಾನುಗಳೊಂದಿಗೆ ಮನೆ ಕಡೆ ಮುಖ ಮಾಡಿದ್ದಾರೆ.