ಕನಸಿನ ಕನ್ಯೆಯ ರಾಧಾ-ಕೃಷ್ಣ ನಾಮ;ಇವರದ್ದು ಜೈ ಭೀಮ್,ಅಲ್ಲಾಹು ಹೆಸರಲ್ಲಿ ಪ್ರಮಾಣ! - ಅಸಾದುದ್ದೀನ್ ಓವೈಸಿ
17ನೇ ಲೋಕಸಭೆಯ ಮೊದಲ ಅಧಿವೇಶನ ನಿನ್ನೆಯಿಂದ ಆರಂಭವಾಗಿದೆ. ಅಧಿವೇಶನ ಆರಂಭದ ದಿನಗಳಲ್ಲಿ ಹೊಸ ಸದಸ್ಯರು ಪ್ರಮಾಣ ಸ್ವೀಕಾರ ಮಾಡುವುದು ಸಂಪ್ರದಾಯ. ಹೀಗಾಗಿ ನೂತನವಾಗಿ ಸಂಸದರಾಗಿ ಆಯ್ಕೆಯಾದ 542 ಮಂದಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಇಂದು ಅನೇಕರು ಸಂಸತ್ತಿನ ಕೆಳಮನೆಯ ಸದಸ್ಯರಾಗಿ ಶಪಥ ಸ್ವೀಕರಿಸಿದರು. ಈ ಬಾರಿಯ ಪ್ರಮಾಣ ವಚನ ಹಲವು ವಿಶೇಷತೆಗಳಿಂದ ಕೂಡಿತ್ತು. ಕೆಲವರು ದೇವರು, ಸತ್ಯನಿಷ್ಠೆ ಹಾಗೂ ಸಂವಿಧಾನದ ಹೆಸರಲ್ಲಿ ಪ್ರಮಾಣ ಸ್ವೀಕರಿಸಿದರೆ, ಇನ್ನು ಕೆಲವರು ತಮ್ಮಿಷ್ಟದ ಭಗವಂತನ ಹೆಸರಲ್ಲಿ ಪ್ರಮಾಣ ಸ್ವೀಕರಿಸಿದರು.