ಊಟ ಇಲ್ಲ ಎಂದ ವೃದ್ಧೆಗೆ ದಿನಸಿ ನೀಡಿದ ಪೊಲೀಸ್! - ದೆಹಲಿ ಪೊಲೀಸ್
ಮಹಾಮಾರಿ ಕೊರೊನಾ ವಿರುದ್ಧ ಹೋರಾಟ ನಡೆಸಲು ಮುಂದಾಗಿರುವ ಕೇಂದ್ರ ಸರ್ಕಾರ 21 ದಿನಗಳ ಲಾಕ್ಡೌನ್ ಮಾಡಿ ಆದೇಶ ಹೊರಡಿಸಲಾಗಿದೆ. ಹೀಗಾಗಿ ಜನಸಾಮಾನ್ಯರು ಸಮಸ್ಯೆ ಎದುರಿಸುತ್ತಿದ್ದು, ರಾಷ್ಟ್ರ ರಾಜಧಾನಿ ಜನರು ಇದರಿಂದ ಹೊರತಾಗಿಲ್ಲ. ದೆಹಲಿಯ ಸೈದುಲಾಜಾ ಪ್ರದೇಶದಲ್ಲಿ ವಾಸಿಸುತ್ತಿರುವ 73 ವರ್ಷದ ಹಿರಿಯ ವೃದ್ಧೆಯೋರ್ವರು ತಮಗೆ ತಿನ್ನುವುದಕ್ಕೆ ಊಟ ಇಲ್ಲ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವರ ಮನವಿಗೆ ಸ್ಪಂದಿಸಿ ಪೊಲೀಸರು ಅಕ್ಕಿ, ಹಿಟ್ಟು ಸೇರಿದಂತೆ ಇತರೆ ದಿನಸಿ ವಸ್ತು ನೀಡಿ ಮಾನವೀಯತೆ ಮೆರೆದಿದ್ದು, ಆಕೆಗೆ ಆರ್ಥಿಕವಾಗಿ ಗುಣಮುಖರಾಗಿದ್ದಾರೆ.