'ಇದು ಪ್ಯಾಕೇಜ್ ಅಲ್ಲ, ಪ್ಯಾಕೇಜಿಂಗ್'; ಕೇಂದ್ರದ ಪ್ಯಾಕೇಜ್ ಕುರಿತು ಪಿ ಸಾಯಿನಾಥ್ ಪ್ರತಿಕ್ರಿಯೆ - ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಪತ್ರಕರ್ತ
ದೇಶಾದ್ಯಂತ ಮಾರ್ಚ್ 24 ರಂದು ಸಂಪೂರ್ಣ ಲಾಕ್ಡೌನ್ ಘೋಷಣೆಗೂ ಮುನ್ನ ಜನರಿಗೆ ಸರಿಯಾಗಿ ಮಾಹಿತಿ ನೀಡಿಲ್ಲ. ಇದರಿಂದಾಗಿ ಜನರು ಭಾರಿ ತೊಂದರೆ ಅನುಭವಿಸುವಂತಾಯ್ತು ಎಂದು ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಮತ್ತು ಪೀಪಲ್ಸ್ ಆರ್ಕೈವ್ಸ್ ಆಫ್ ರೂರಲ್ ಇಂಡಿಯಾದ (ಪರಿ) ಸಂಪಾದಕರಾದ ಪಿ. ಸಾಯಿನಾಥ್ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈಟಿವಿ ಭಾರತ ನಡೆಸಿದ ವಿಶೇಷ ಸಂದರ್ಶನದಲ್ಲಿ ಅವರು ಮಾತನಾಡಿದರು.