ಕರ್ನಾಟಕ

karnataka

By

Published : Nov 15, 2020, 8:37 AM IST

ETV Bharat / videos

ಚಳಿ ತಡೆಯಲಾರದೆ ಬಳಸಿ ಬಿಸಾಡಿದ ಪಿಪಿಇ ಕಿಟ್ ಧರಿಸಿದ ವೃದ್ಧ!

ವಿಶಾಖಪಟ್ಟಣ: ಆಂಧ್ರಪ್ರದೇಶದ ವಿಶಾಖಪಟ್ಟಣಂನ ಪೆಡರು ಪ್ರದೇಶದಲ್ಲಿ ಚಳಿಯನ್ನು ತಡೆಯಲಾಗದೆ ಕ್ಲೀನರ್​ ಆಗಿ ಕೆಲಸ ನಿರ್ವಹಿಸುವ ವೃದ್ಧನೋರ್ವ ಬಳಸಿ ಬಿಸಾಡಿದ ಪಿಪಿಇ ಕಿಟ್ ಧರಿಸಿರುವುದು ಕಂಡುಬಂದಿದೆ. ಪಿಪಿಇ ಕಿಟ್ ಧರಿಸಿ ರಸ್ತೆಯಲ್ಲಿ ಓಡಾಡುವುದನ್ನು ಗಮನಿಸಿದ ಜನರು ಆತ ಕೊರೊನಾ ರೋಗಿಯಾಗಿರಬಹುದೇ ಎಂದು ಅನುಮಾನಿಸಿ ಆತಂಕಕ್ಕೊಳಗಾದರು. ಆ ವೃದ್ಧನ ಬಳಿ ವಿಚಾರಿಸಿದಾಗ, ಶೀತ ತಡೆಯಲಾಗದೆ ಇದನ್ನು ಧರಿಸಿರುವೆ ಎಂದು ಪ್ರತಿಕ್ರಿಯಿಸಿದ್ದಾರೆ. ಆ ಪಿಪಿಇ ಕಿಟ್ ಅನ್ನು ಈಗಾಗಲೇ ವೈದ್ಯಕೀಯ ಸಿಬ್ಬಂದಿ ಬಳಸಿದ್ದರಿಂದ ಅದನ್ನು ಸುಡುವಂತೆ ಸ್ಥಳೀಯರು ವೃದ್ಧನಿಗೆ ಸಲಹೆ ನೀಡಿದರು.

ABOUT THE AUTHOR

...view details