ಹಾವು ಕಚ್ಚಿತೆಂದು ಉರಗಕ್ಕೇ ಎರಡು ಬಾರಿ ಕಚ್ಚಿದ ಆಸಾಮಿ... ವಿಡಿಯೋ - ಹಾವು
ಹಿಂಗೋಲಿ(ಮಹಾರಾಷ್ಟ್ರ): ನಾಗರಹಾವನ್ನು ಹಿಡಿಯಲು ಹೋದ ವ್ಯಕ್ತಿಯೊಬ್ಬನಿಗೆ ಹಾವು ಕೈಗೆ ಸಿಗದೇ ಸತಾಯಿಸುತ್ತಿತ್ತು. ಬಳಿಕ ಕೈಗೆ ಸಿಕ್ಕಿದ ಹಾವು ಭಯದಲ್ಲಿ ಆತನಿಗೆ ಕಚ್ಚಿಬಿಟ್ಟಿದೆ. ಕ್ರೋಧಗೊಂಡ ಆತ ಹಾವು ಹಿಡಿದು ಎರಡು ಬಾರಿ ಕಚ್ಚಿದ್ದಾನೆ. ಬಳಿಕ ಚಿಕಿತ್ಸೆಗಾಗಿ ತನ್ನೊಂದಿಗೆ ಹಾವನ್ನೂ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದು, ಜನರು ಆತನನ್ನು ನೋಡಲು ಮುಗಿಬಿದ್ದಿದ್ದರು.