'ಪೈನಾಪಲ್ ಸ್ಮೂತಿ' ಕುಡಿದು ದೇಹದ ಉಷ್ಣತೆ ನಿಯಂತ್ರಿಸಿ - ಬೇಸಿಗೆ ಪಾನೀಯ
ಹಾಲನ್ನು ಬಳಸಿ ಪೈನಾಪಲ್ ಅಥವಾ ಅನಾನಸ್ ಹಣ್ಣಿನಿಂದ ತಯಾರಿಸಿದ ಜ್ಯೂಸ್ ಕುಡಿಯುವುದು ಸರ್ವೇಸಾಮಾನ್ಯ. ಆದರೆ ನಾವಿಲ್ಲಿ ಹಾಲಿನ ಬದಲಾಗಿ ಮೊಸರನ್ನು ಬಳಸಿ, ಕಿತ್ತಳೆ ಹಾಗೂ ಪೈನಾಪಲ್ ಮಿಶ್ರಿತ ಸ್ಮೂತಿ ತಯಾರಿಸಿದ್ದೇವೆ. ಮೊಸರಿನಲ್ಲಿ ಲ್ಯಾಕ್ಟೋಸ್ ಅಂಶವಿರುವುದರಿಂದ ಇದು ನಿಮ್ಮ ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ. ರುಚಿಕರವಾದ ಪೈನಾಪಲ್ ಸ್ಮೂತಿ ಸವಿದು, ನಿಮಗೆ ತಿಳಿದಿರುವ ಪಾನೀಯಗಳ ಪಾಕವಿಧಾನವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.