ಮನೆಯ ಕೋಣೆಗೆ ನುಗ್ಗಿ ಬಂಧಿಯಾದ ಚಿರತೆ: ಹೊರಬರಲು ಘರ್ಜಿಸುತ್ತಿರುವ ವಿಡಿಯೋ ನೋಡಿ - ಕರ್ಸೋಗ್ ಚಿರತೆ ಸುದ್ದಿ
ಕರ್ಸೋಗ್: ಹಿಮಾಚಲ ಪ್ರದೇಶದ ಕರ್ಸೋಗ್‌ನ ಗ್ರಾಮವೊಂದರಲ್ಲಿನ ಮನೆಯೊಳಗೆ ನಿನ್ನೆ ರಾತ್ರಿ ಚಿರತೆ ನುಗ್ಗಿದೆ. ಚಿರತೆ ಕೋಣೆಗೆ ಪ್ರವೇಶಿಸಿಸುವುದನ್ನು ಕಂಡ ಮನೆಯ ಸದಸ್ಯರು ತಕ್ಷಣವೇ ಹೊರಬಂದು ಬಾಗಿಲು ಮುಚ್ಚಿ ಬೀಗ ಹಾಕಿದ್ದಾರೆ. ರಾತ್ರಿಯಿಂದ ಕೋಣೆಯಲ್ಲಿ ಬಂಧಿಯಾಗಿರುವ ಚಿರತೆ ಹೊರಬರಲು ಕೋಪದಿಂದ ಘರ್ಜಿಸುತ್ತಿದ್ದು, ಇದನ್ನು ಕಂಡು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ದೌಡಾಯಿಸಿದ್ದು, ಚಿರತೆ ಸೆರೆಹಿಡಿಯಲು ತಯಾರಿ ನಡೆಸುತ್ತಿದ್ದಾರೆ.