ಕರ್ನಾಟಕ

karnataka

ETV Bharat / videos

ದೇವರನಾಡಲ್ಲಿ 'ನೀಲಕುರಿಂಜಿ' ಆಕರ್ಷಣೆ: 12 ವರ್ಷಕ್ಕೊಮ್ಮೆ ಸ್ವರ್ಗವೇ ಧರೆಗಿಳಿದಂಥ ಚೆಲುವು

By

Published : Aug 2, 2021, 9:32 AM IST

ಕೇರಳ: ಇಡುಕ್ಕಿಯ ಸಂತಾನ್​ಪರ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಶಾಲೋಮ್​ ಬೆಟ್ಟದಲ್ಲಿ 'ನೀಲಕುರಿಂಜಿ' ಹೂವುಗಳು ಅರಳಿವೆ. ಈ ಹೂವುಗಳು 12 ವರ್ಷಗಳಿಗೊಮ್ಮೆ ಅರಳುತ್ತವಂತೆ. ಈ ಹಿಂದೆಲ್ಲಾ ಹೂಗಳ ಸೌದಂರ್ಯ ಸವಿಯಲು ಪ್ರವಾಸಿಗರು ಇಲ್ಲಿ ಆಗಮಿಸುತ್ತಿದ್ದರು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಪ್ರಸ್ತುತ ಪ್ರವೇಶಕ್ಕೆ ಅನುಮತಿ ಇಲ್ಲ. ಮಲಯಾಳಂ ಮತ್ತು ತಮಿಳಿನಲ್ಲಿ ನೀಲಕುರಿಂಜಿ ಮತ್ತು ಕುರಿಂಜಿ ಎಂದು ಕರೆಯಲ್ಪಡುವ ಈ ಹೂವು ವೈಜ್ಞಾನಿಕವಾಗಿ ಸ್ಟ್ರೋಬಿಲೆಂಥೆಸ್ ಕುಂಥಿಯಾನ ಜಾತಿಗೆ ಸೇರಿದೆ. ಇದು ಕೇರಳ ಮತ್ತು ತಮಿಳುನಾಡಿನ ಪಶ್ಚಿಮ ಘಟ್ಟಗಳ ಶೋಲಾ ಕಾಡುಗಳಲ್ಲಿ ಕಂಡುಬರುವ ಪೊದೆಸಸ್ಯವಾಗಿದೆ. ಈ ಬಾರಿ 10 ಎಕರೆಗೂ ಹೆಚ್ಚು ಪ್ರದೇಶದಲ್ಲಿ ನೀಲಕುರಿಂಜಿ ಹೂವುಗಳು ಅರಳಿವೆ.

ABOUT THE AUTHOR

...view details