ಆಯಸ್ಸು ಗಟ್ಟಿ ಇದ್ರೆ ಯಾರೇನು ಮಾಡೋಕಾಗಲ್ಲ... ಚಲಿಸುತ್ತಿದ್ದ ಕಾರಿನಿಂದ ಬಿದ್ರು ಬದುಕುಳಿಯಿತು ಮಗು! - ನಡುರೋಡಿನಲ್ಲಿ ಬಿದ್ರು ಬದುಕುಳಿತು ಮಗು
ಇಡುಕ್ಕಿ(ಕೇರಳ): ಆಯಸ್ಸು ಗಟ್ಟಿ ಇದ್ದರೆ, ಯಾರೇನೂ ಮಾಡೋಕಾಗಲ್ಲ. ಎಂಥ ಭೀಕರ ಅಪಘಾತವಾದರೂ ಕೂದಲೂ ಕೊಂಕದಂತೆ ಪಾರಾಗಿಬಿಡ್ತೀವಿ. ಇಂಥದ್ದೊಂದು ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್ನಲ್ಲಿ ನಡೆದಿದ್ದು, ತಡರಾತ್ರಿ ರಸ್ತೆ ಮೇಲೆ ತೆರಳುತ್ತಿದ್ದ ಕಾರಿನಿಂದ ಏಕಾಏಕಿ ಒಂದು ವರ್ಷದ ಹೆಣ್ಣು ಮಗುವೊಂದು ಕೆಳಗೆ ಬಿದ್ದಿದೆ. ಇಷ್ಟಾದರೂ ಮಗುವಿಗೆ ಯಾವುದೇ ರೀತಿಯ ತೊಂದರೆಯಾಗದೇ ಅದು ಅಂಬೆಗಾಲಿಡುತ್ತಾ ರಸ್ತೆ ಪಕ್ಕದಲ್ಲಿ ಬಂದು ನಿಂತುಕೊಂಡಿದೆ. ದೃಶ್ಯ ವೀಕ್ಷಸಿರುವ ಪೊಲೀಸರು ಪೋಷಕರಿಗೆ ಮಗು ಹಸ್ತಾಂತರ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Last Updated : Sep 9, 2019, 9:00 PM IST