ಮಿಂಚಿನ ವೇಗದಲ್ಲಿ ಜಿಂಕೆಯ ಬೇಟೆಯಾಡಿದ ವ್ಯಾಘ್ರ: ವಿಡಿಯೋ ವೈರಲ್
ನಾಗ್ಪುರ(ಮಹಾರಾಷ್ಟ್ರ): ಇಲ್ಲಿನ ಪೆಂಚ್ ಅಭಯಾರಣ್ಯದಲ್ಲಿನ ಚೋರ್ಬಾಹುಲಿ ಗೇಟ್ ಬಳಿ ಹುಲಿಯೊಂದು ಜಿಂಕೆಯನ್ನು ಬೇಟೆಯಾಡಿರುವ ವಿಡಿಯೋವೊಂದು ಎಲ್ಲೆಡೆ ವೈರಲ್ ಆಗುತ್ತಿದೆ. ಈ ದೃಶ್ಯಾವಳಿಯನ್ನು ಪ್ರವಾಸಿಗರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಆಹಾರ ಹುಡುಕುತ್ತಿದ್ದ ವೇಳೆ ಹುಲಿಗೆ ಜಿಂಕೆ ಕಾಣಿಸಿಕೊಂಡಿದ್ದು, ಮಿಂಚಿನ ವೇಗದಲ್ಲಿ ಓಡಿ ಜಿಂಕೆಯನ್ನು ಹಿಡಿದಿರುವುದು ಜನರನ್ನು ನಿಬ್ಬೆರಗಾಗಿಸುವಂತೆ ಮಾಡಿದೆ.