ಡ್ರ್ಯಾಗನ್ ವಿರುದ್ಧ ಆಕ್ರೋಶ.. ಚೀನಿ ಸ್ಮಾರ್ಟ್ಫೋನ್ ಕುಟ್ಟಿ ಪುಡಿಮಾಡಿದ ವ್ಯಕ್ತಿ - ಚೀನಾ ಸ್ಮಾರ್ಟ್ಫೋನ್ ಕುಟ್ಟಿ ಹಾಕಿದ ವ್ಯಕ್ತಿ
ರಾಜಸ್ಥಾನ : ಕಳೆದ ಕೆಲವು ದಿನಗಳಿಂದ ಚೀನಾ ವಸ್ತುಗಳ ಬಹಿಷ್ಕಾರದ ಬಗ್ಗೆ ಜನ ಧ್ವನಿ ಎತ್ತುತ್ತಿದ್ದಾರೆ. ಆದರೆ, ರಾಜಸ್ಥಾನದ ಉದೈಪುರದ ಗಜೇಂದ್ರ ಸಿಂಗ್ ಎಂಬುವರು ಒಂದು ಹೆಚ್ಚೆ ಮುಂದೆ ಹೋಗಿದ್ದಾರೆ. ತಾವು ಬಳಸುತ್ತಿದ್ದ ಚೀನಿ ಸ್ಮಾರ್ಟ್ಫೋನ್ನ ಕುಟ್ಟಿ ಪುಡಿ ಮಾಡಿದ್ದಾರೆ. ಅಲ್ಲದೆ ಈ ವಿಡಿಯೋವನ್ನು ಜಾಲತಾಣದಲ್ಲಿ ಹರಿ ಬಿಟ್ಟು ಚೀನಾ ವಸ್ತುಗಳನ್ನು ಬಳಸದಂತೆ ಕರೆ ನೀಡಿದ್ದಾರೆ..