ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ ಗಜರಾಜ... ರೈಲು ಹತ್ತೋದೊಂದೇ ಬಾಕಿ! - ಜನನಿಬಿಡ ಪ್ರದೇಶದಲ್ಲಿ ಆನೆಗಳ ಹಾವಳಿ
ಹರಿದ್ವಾರ: ಕುಂಭ ನಗರದಲ್ಲಿನ ಜನನಿಬಿಡ ಪ್ರದೇಶದಲ್ಲಿ ಆನೆಗಳ ಹಾವಳಿ ಮಿತಿಮೀರಿದೆ. ಎರಡು ಆನೆಗಳು ಕಾಡಿನಿಂದ ಹರಿದ್ವಾರ ರೈಲ್ವೆ ನಿಲ್ದಾಣಕ್ಕೆ ಬಂದು ರಾಜಾರೋಷವಾಗಿ ಸುಮಾರು ಹೊತ್ತು ಅಲೆದಾಡಿವೆ. ಧಾರ್ಮಿಕ ನಗರ ಹರಿದ್ವಾರದಲ್ಲಿ ಈಗ ಮಹಾಕುಂಭಮೇಳ ಪ್ರಾರಂಭವಾಗಿದೆ. ರಾಷ್ಟ್ರ ಮತ್ತು ವಿದೇಶಗಳಿಂದ ಲಕ್ಷಾಂತರ ಭಕ್ತರು ಇಲ್ಲಿಗೆ ಬರುತ್ತಾರೆ. ಆದರೆ, ಈ ರೀತಿ ಕಾಡುಪ್ರಾಣಿಗಳು ಎಲ್ಲೆಂದರಲ್ಲಿಗೆ ಬರುತ್ತಿದ್ದರೆ ಭಕ್ತರು ಇಲ್ಲಿಗೆ ಬರುವುದಾದರೂ ಹೇಗೆ ಎಂಬ ಪ್ರಶ್ನೆ ಮೂಡಿದೆ.