ಇಷ್ಟಪಟ್ಟು ಐಪಿಎಲ್ ನೋಡಿದ್ದರಂತೆ, ಚಿಕಿತ್ಸೆ ಪಡೆಯುವಾಗ ಹೀಗಿದ್ದರಂತೆ 'ಎಸ್‌ಪಿಬಿ'.. - Chennai Latest
ಚೆನ್ನೈ: ಎಸ್ ಪಿ ಬಾಲಸುಬ್ರಹ್ಮಣ್ಯಂ ಕೊರೊನಾದಿಂದ ತಮ್ಮನ್ನು ಕಾಪಾಡಿಕೊಳ್ಳಲು ಓರ್ವ ಫೈಟರ್ ರೀತಿ ಪ್ರತಿದಿನ ಚಿಕಿತ್ಸೆಗೆ ಸ್ಪಂದಿಸುತ್ತಿದ್ದರು. ವೆಂಟಿಲೇಟರ್ ಸಹಾಯದಿಂದ ಅವರ ಜೊತೆ ಮಾತನಾಡುತ್ತಿದ್ದೆವು. ಕೊರೊನಾದಿಂದ ಗಂಟಲಿನಲ್ಲಿ ಸಮಸ್ಯೆ ಕಾಣಿಸಿತ್ತು. ಈ ಹಿನ್ನೆಲೆ ಅವರಿಗೆ ಪೆನ್ನು ಮತ್ತು ಪುಸ್ತಕ ನೀಡಿದ್ದೆವು. ಅದರಲ್ಲಿ ಬರೆದು ತಮಗೆ ಏನಾದ್ರೂ ಬೇಕಂದ್ರೆ ತಿಳಿಸುತ್ತಿದ್ದರು. ಅವರಿಗೆ ಐಪಿಎಲ್ ಮ್ಯಾಚ್ ಅಂದ್ರೆ ತುಂಬಾ ಇಷ್ಟ. ಅದನ್ನು ನೋಡಬೇಕು ಎಂದಿದ್ದರು. ಅವರಿಗೆ ಚಿಕಿತ್ಸೆ ನೀಡಲು ಯಾವುದೇ ಸಮಸ್ಯೆ ಎದುರಾಗಿಲ್ಲ ಎಂದು ಎಸ್ಪಿಬಿಗೆ ಚಿಕಿತ್ಸೆ ನೀಡಿದ್ದ ಎಂಜಿಎಂ ಆಸ್ಪತ್ರೆಯ ವೈದ್ಯ ಡಾ. ಸುರೇಶ್ ರಾವ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
Last Updated : Sep 27, 2020, 7:56 PM IST