'33 ಕೋಟಿ ವಿದ್ಯಾರ್ಥಿಗಳ ಪೋಷಕರು, 9 ಲಕ್ಷ ಶಿಕ್ಷಕರ ಜತೆ ಚರ್ಚಿಸಿ ರಾಷ್ಟ್ರೀಯ ಶಿಕ್ಷಣ ನೀತಿ ತಯಾರಿ' - ರಮೇಶ್ ಪೋಖ್ರಿಯಾಲ್ ನಿಶಾಂಕ್
ಭಾರತದಂತಹ ರಾಷ್ಟ್ರದಲ್ಲಿ ಯಾವುದೇ ಒಂದು ನೀತಿ ಜಾರಿಗೆ ತರಬೇಕಾದರೆ ವಿಶಾಲ ರೂಪದ ಅಭಿಪ್ರಾಯಗಳನ್ನು ಸಂಗ್ರಹಿಸಬೇಕಾಗುತ್ತದೆ. ಭಾರತ ಸರ್ಕಾರವು ಒಂದು ನೀತಿಯನ್ನು ರೂಪಿಸಿದಾಗ, ಅದು ಇಡೀ ದೇಶಕ್ಕೆ ಅನ್ವಯ ಆಗುವಂತೆ ನೋಡುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸುವಾಗಲೂ ರಾಜ್ಯಗಳೊಂದಿಗೆ ಬಹಳ ವಿಶಾಲವಾಗಿ ಚರ್ಚಿಸಿದ್ದೇವೆ. 33 ಕೋಟಿ ವಿದ್ಯಾರ್ಥಿಗಳ ಪೋಷಕರು, 1,000ಕ್ಕೂ ಅಧಿಕ ವಿವಿಗಳ ಕುಲಪತಿಗಳು, 45,000ಕ್ಕೂ ಹೆಚ್ಚು ಪದವಿ ಕಾಲೇಜು ಸೇರಿ 9 ಲಕ್ಷ ಶಿಕ್ಷಕರೊಂದಿಗೆ ಮಾತನಾಡಿದ್ದೇವೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಈಟಿವಿ ಭಾರತಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದರು.