ಶುಭಕಾರ್ಯಕ್ಕೆ ತೆರಳುತ್ತಿದ್ದ ದಂಪತಿ ಮೇಲೆ ಹರಿದ ಬಸ್... ಸಂಬಂಧಿಕರ ಪ್ರತಿಭಟನೆ, 10 ಕಿ.ಮೀ ವರೆಗೆ ಟ್ರಾಫಿಕ್ಕೋ ಟ್ರಾಫಿಕ್! - ರಂಗಾರೆಡ್ಡಿ ರಸ್ತೆ ಅಪಘಾತ ಸುದ್ದಿ
ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಅಂಬರ್ಪೇಟ ಬಾಹ್ಯವಲಯ ಹೆದ್ದಾರಿ (ಔಟರ್ ರಿಂಗ್ ರೋಡ್) ಬಳಿ ಸಂಭವಿಸಿದ ಅಪಘಾತದಲ್ಲಿ ದಂಪತಿ ಮೃತಪಟ್ಟಿದ್ದಾರೆ. ಶುಭ ಕಾರ್ಯಕ್ಕೆ ತೆರಳುತ್ತಿದ್ದ ದಂಪತಿಗೆ ವೇಗವಾಗಿ ಬಂದ ಸರ್ಕಾರಿ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಗಂಡ ರಂಗಾರೆಡ್ಡಿ ಮತ್ತು ಹೆಂಡ್ತಿ ವಜ್ರಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುದ್ದಿ ತಿಳಿದ ಕುಟುಂಬಸ್ಥರು ಮತ್ತು ಸಂಬಂಧಿಕರು ಸ್ಥಳಕ್ಕೆ ದೌಡಾಯಿಸಿದರು. ಬಳಿಕ ರಸ್ತೆ ಬಂದ ಮಾಡಿ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಪ್ರತಿಭಟನೆ ನಡೆಸಿದ್ದಾರೆ. ಮೃತರ ಸಂಬಂಧಿಕರು ಮತ್ತು ಕುಟುಂಬಸ್ಥರ ದಿಢೀರ್ ಪ್ರತಿಭಟನೆ ಹಿನ್ನೆಲೆ ಸುಮಾರು 10 ಕಿ.ಮೀ ವರೆಗೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡಿದರು.