ಕರ್ನಾಟಕ

karnataka

ETV Bharat / videos

ಬಿಲ್​ ವಿಚಾರವಾಗಿ ಹೈಡ್ರಾಮಾ: ಆಸ್ಪತ್ರೆಯಲ್ಲಿ ವೈದ್ಯರು-ರೋಗಿ ಕುಟುಂಬದವರ ಮಧ್ಯೆ ಫೈಟ್​

By

Published : Apr 26, 2021, 9:00 PM IST

Updated : Apr 26, 2021, 9:29 PM IST

ಇಂದೋರ್​​: ಮಧ್ಯಪ್ರದೇಶದ ಇಂದೋರ್​ ಚಿರಾಯು ಆಸ್ಪತ್ರೆಯ ವೈದ್ಯರು ಮತ್ತು ರೋಗಿಯ ಕುಟುಂಬಸ್ಥರ ನಡುವೆ ತೀವ್ರ ಜಗಳ ನಡೆದಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ನಿನ್ನೆ ಆಸ್ಪತ್ರೆಗೆ ರೋಗಿವೋರ್ವನನ್ನು ದಾಖಲಿಸಲಾಗಿದೆ. ಈ ವೇಳೆ ಜನರಲ್​ ವಾರ್ಡ್​​ನಲ್ಲಿ ಹಾಸಿಗೆಗೆ 3 ಸಾವಿರ ರೂ. ಬಾಡಿಗೆ ಹಾಗೂ 20 ಸಾವಿರ ರೂ. ಠೇವಣಿ ಇರಿಸಿಕೊಳ್ಳಲಾಗಿದೆಯಂತೆ. ಆದರ ಮರುದಿನವೇ ಆಸ್ಪತ್ರೆಯಲ್ಲಿ ಕಳಪೆ ಸೌಲಭ್ಯವಿದೆ ಎಂದು ರೋಗಿಯನ್ನ ಬೇರೆ ಆಸ್ಪತ್ರೆಗೆ ಕರೆದೊಯ್ಯಲು ಕುಟುಂಬಸ್ಥರು ಮುಂದಾಗಿದ್ದಾರೆ. ಈ ವೇಳೆ ಆಸ್ಪತ್ರೆಯವರು ಜನರಲ್​​ ವಾರ್ಡ್​ನ ಬಿಲ್​​ ನೀಡುವ ಬದಲಾಗಿ ಡಿಲಕ್ಸ್​ ವಾರ್ಡ್​​ ಎಂದು 19 ಸಾವಿರ ರೂ. ಬಿಲ್​ ನೀಡಿದ್ದಾರೆ ಎನ್ನಲಾಗ್ತಿದೆ. ಈ ವಿಚಾರವಾಗಿ ಕುಟುಂಬ ಹಾಗೂ ವೈದ್ಯರ ನಡುವೆ ಜಗಳವಾಗಿದೆ. ವೈದ್ಯರು ತಮ್ಮ ಸಹೋದ್ಯೋಗಿಗಳೊಂದಿಗೆ ಸೇರಿ ರೋಗಿ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇದೀಗ ಘಟನೆಗೆ ಸಂಬಂಧಿಸಿದಂತೆ ವೈದ್ಯರು ಹಾಗೂ ರೋಗಿ ಕಡೆಯವರು ದೂರು-ಪ್ರತಿದೂರು ನೀಡಿದ್ದಾರೆ. ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸುತ್ತಿರುವ ಪೊಲೀಸರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
Last Updated : Apr 26, 2021, 9:29 PM IST

ABOUT THE AUTHOR

...view details