ಸಂಸದರ ಎದುರೇ ಹೊಡೆದಾಡಿಕೊಂಡ ಜನ: 11 ಮಂದಿಗೆ ಗಾಯ - ಮಹಾರಾಜಗಂಜ್‌ನ ಬಿಜೆಪಿ ಸಂಸದ ಜನಾರ್ಧನ್ ಸಿಂಗ್ ಸಿಗ್ರಿವಾಲ್
ಪಾಟ್ನಾ( ಬಿಹಾರ): ಪ್ರಸಾರ ಸಂತ್ರಸ್ತರನ್ನು ಭೇಟಿಯಾಗಲು ಬಂದ ಮಹಾರಾಜಗಂಜ್‌ನ ಬಿಜೆಪಿ ಸಂಸದ ಜನಾರ್ದನ್ ಸಿಂಗ್ ಸಿಗ್ರಿವಾಲ್ ಅವರನ್ನು ಜನರು ಸುತ್ತುವರೆದು ತೀವ್ರವಾಗಿ ವಿರೋಧ ವ್ಯಕ್ತಡಿಸಿದ ಘಟನೆ ನಡೆದಿದೆ. ಈ ವೇಳೆ ಸಂಸದರ ಬೆಂಬಲಿಗರು ಹಾಗೂ ಜನರ ನಡುವೆ ಗಲಾಟೆ ನಡೆದಿದ್ದು, ಕುರ್ಚಿಗಳ ಮೂಲಕ ಹೊಡೆದಾಡಿಕೊಂಡಿದ್ದಾರೆ. ಸಿವಾನ್ ಜಿಲ್ಲೆಯ ನಬಿಗಂಜ್ ಮತ್ತು ಬಸಂರ್ಪುರ ಬ್ಲಾಕ್‌ಗಳಲ್ಲಿನ ಅನೇಕ ಗ್ರಾಮಗಳು ಪ್ರವಾಹದಿಂದ ಸಂಪೂರ್ಣವಾಗಿ ಮುಳುಗಿವೆ. ಆದರೆ, ಯಾವುದೇ ನೆರವು ಸಿಗುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯಲ್ಲಿ 11 ಜನ ಗಾಯಗೊಂಡಿದ್ದಾರೆ.