ಚಾಟಿ ಏಟು ತಿಂದ ಛತ್ತೀಸ್‌ಗಢ ಸಿಎಂ; ಕಾರಣ ಇದೇ ನೋಡಿ - ವಿಡಿಯೋ - ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್
ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ದುರ್ಗ್‌ನಲ್ಲಿ ಗೋವರ್ಧನ ಪೂಜೆಯ ಆಚರಣೆಯ ಅಂಗವಾಗಿ ಚಾಟಿಯಿಂದ ಹೊಡೆಸಿಕೊಂಡಿದ್ದಾರೆ. ದುರ್ಗ್ ಜಿಲ್ಲೆಯ ಜಾಂಜ್ ಗರಿ ಗ್ರಾಮದಲ್ಲಿ ಗೋವರ್ಧನ ಪೂಜೆಯಲ್ಲಿ ಪಾಲ್ಗೊಂಡು ಪ್ರತಿ ವರ್ಷದಂತೆ ಈ ಬಾರಿಯೂ ಹುಲ್ಲಿನಿಂದ ಮಾಡಿದ ಚಾಟಿ ಏಟು ತಿನ್ನುವ ಸಂಪ್ರದಾಯವನ್ನು ಪಾಲಿಸಿದ್ದಾರೆ. ರಾಜ್ಯದ ಒಳಿತಿಗಾಗಿ ಪ್ರಾರ್ಥಿಸಿದ್ದು, ನಮ್ಮ ನೆಲದ ಅಸ್ಮಿತೆಯನ್ನು ಕಾಪಾಡುವುದು ಮತ್ತು ಅದನ್ನು ಉತ್ತೇಜಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಸಿಎಂ ಬಘೇಲ್ ಹೇಳಿದ್ದಾರೆ.