ನಾವ್ ನಮ್ಮಿಷ್ಟದಂಗೆ ಇರ್ತೀವಿ ಏನೀವಾಗ,, ಲಾಕ್ಡೌನ್ ಇದ್ರೂ ಕೇರ್ ಮಾಡಲ್ಲ!! - ಪಾತರಗಿತ್ತಿ
ಲಾಕ್ಡೌನ್ನಿಂದಾಗಿ ಮಾಲಿನ್ಯ ಮಟ್ಟ ಕಡಿಮೆಯಾದ ಹಿನ್ನೆಲೆ ಬಿಹಾರದ ಮುಜಾಫರ್ಪುರ್ ಲಿಚಿ ಉದ್ಯಾನವನದಲ್ಲಿ ಚಿಟ್ಟೆಗಳ ಕಲರವ ಬಲು ಜೋರಾಗಿದೆ. ಲಾಕ್ಡೌನ್ನಿಂದಾಗಿ ಚಿಟ್ಟೆಗಳ ಸಂಖ್ಯೆ ಕೂಡ ಹೆಚ್ಚಿದೆ. ಮಾಲಿನ್ಯ ಕಡಿಮೆಯಾದ ಕಾರಣ ಚಿಟ್ಟೆಗಳಿಗೆ ಆಹ್ಲಾದಕರ ವಾತಾವರಣ ಏರ್ಪಟ್ಟಿದೆ. ಬಹು ವರ್ಷಗಳ ನಂತರ ಚಿಟ್ಟೆಗಳ ಗುಯ್ ಗುಯ್ ನಾದ ಕೇಳುತ್ತಿದೆ. ವಿವಿಧ ಬಗೆಯ ಬಣ್ಣ-ಬಣ್ಣದ ಚಿಟ್ಟೆಗಳ ಹಾರಾಟದ ಮನಮೋಹಕ ದೃಶ್ಯ ಕಂಡು ಜನ ರೋಮಾಂಚನಗೊಂಡಿದ್ದಾರೆ.