ಕನಿಷ್ಠ ಸೌಕರ್ಯವೂ ಇಲ್ಲಿ ಮರೀಚಿಕೆ... ದಾರಿ ಮಧ್ಯದಲ್ಲೇ ಹೆರಿಗೆ..! - ಗರ್ಭಿಣಿ
ಅಸ್ಸೋಂ: ಆಸ್ಪತ್ರೆಗೆ ಗರ್ಭಿಣಿ ಅಥವಾ ರೋಗಿಗಳನ್ನು ಸಾಗಿಸಲು ಕನಿಷ್ಠ ಸೌಕರ್ಯವೂ ಇಲ್ಲದ ಅಸ್ಸೋಂನ ಚಿರಾಂಗ್ ಜಿಲ್ಲೆಯ ಉದಲ್ಗುರಿ ಗ್ರಾಮದಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯದಲ್ಲೇ ಹೆರಿಗೆಯಾಗಿದೆ. ಪ್ಲಾಸ್ಟಿಕ್ನಿಂದ ಮುಚ್ಚಲ್ಪಟ್ಟಿದ್ದ ಮಂಚದಲ್ಲಿ ಗರ್ಭಿಣಿಯನ್ನು ಮಲಗಿಸಿ ಐದು ಕಿ.ಮೀ ದೂರದಲ್ಲಿರುವ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆಸ್ಪತ್ರೆ ತಲುಪುವ ಮುನ್ನವೇ ಆಕೆಗೆ ಹೆರಿಗೆಯಾಗಿದೆ. ಸದ್ಯ ಅಮ್ಮ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.
Last Updated : Sep 9, 2019, 10:01 AM IST