ಕರ್ನಾಟಕ

karnataka

ETV Bharat / videos

ಕಚ್ಚಿದ ಹಾವನ್ನೇ ಹಿಡಿದುಕೊಂಡು ಆಸ್ಪತ್ರೆಗೆ ಬಂದ ಯುವಕ, ಅಷ್ಟಕ್ಕೇ ಮುಗಿಯಲಿಲ್ಲ...! - ಸಂತ ಕಬೀರ್​ನಗರ ಜಿಲ್ಲೆ

By

Published : Sep 30, 2019, 5:57 PM IST

Updated : Sep 30, 2019, 7:43 PM IST

ಉತ್ತರ ಪ್ರದೇಶದ ಸಂತ ಕಬೀರ್​ನಗರ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ ನಾಗರ ಹಾವು ಕಚ್ಚಿತ್ತು. ಬಳಿಕ ಆ ಯುವಕ ಕಚ್ಚಿದ ಹಾವು ಹಿಡಿದುಕೊಂಡೇ ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬಂದಿದ್ದಾನೆ. ಆದರೆ, ಅವ್ಯವಸ್ಥೆಯಿಂದ ಕೂಡಿದ್ದ ಆಸ್ಪತ್ರೆ ವಾತಾವರಣವನ್ನು ನೋಡಿದ ಯುವಕ, ಆಸ್ಪತ್ರೆ ವರಾಂಡದಲ್ಲೇ ಕಚ್ಚಿದ ಹಾವಿನೊಂದಿಗೆ ಆಟವಾಡುತ್ತಾ ಕುಳಿತಿದ್ದಾನೆ. ಬಳಿಕ ಇದನ್ನು ನೋಡಿದ ಆಸ್ಪತ್ರೆ ವೈದ್ಯರು, ಆತನಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ಜಿಲ್ಲಾಸ್ಪತ್ರೆಗೆ ವರ್ಗಾಯಿಸಿದ್ದಾರೆ. ಅಲ್ಲದೇ ಹಾವನ್ನು ಕೂಡಾ ಆಸ್ಪತ್ರೆಯಿಂದ ಹೊರಗೆ ಕಳುಹಿಸಿದ್ದಾರೆ. ಯುವಕನ ಹಾವಿನಾಟ ಮೊಬೈಲ್​ ಕ್ಯಾಮರಾದಲ್ಲಿ ಸೆರೆಯಾಗಿದೆ.
Last Updated : Sep 30, 2019, 7:43 PM IST

ABOUT THE AUTHOR

...view details