ದೇಶವನ್ನು ಒಗ್ಗೂಡಿಸಿದ್ದ 'ಉಪ್ಪು'... ಅದಕ್ಕೆ ಪ್ರೇರಣೆ ಈ ಮಹಾತ್ಮ - ಕಾನೂನು ಭಂಗ ಚಳವಳಿ
ಭಾರತದ ಇತಿಹಾಸದಲ್ಲಿ 1930 ನಿರ್ಣಾಯಕ ವರ್ಷ. ಆಗ ಮಹಾತ್ಮ ಗಾಂಧೀಜಿ ಅವರು ಕರಾವಳಿ ಪಟ್ಟಣವಾದ ದಂಡಿಯಲ್ಲಿ ಬ್ರಿಟಿಷ್ ದಬ್ಬಾಳಿಕೆಯ ಉಪ್ಪಿನ ಕಾನೂನನ್ನು (salt law) ಮುರಿದರು. ಬಳಿಕ ರಾಷ್ಟ್ರವ್ಯಾಪಿ ಕಾನೂನು ಭಂಗ ಚಳವಳಿ ಇಲ್ಲವೇ ಅಸಹಕಾರ ಚಳವಳಿ ಆರಂಭವಾಯಿತು. ಒಡಿಶಾದ ಗಂಜಾಂ ಜಿಲ್ಲೆಯ ಹುಮ್ಮ ಎಂಬ ಪುಟ್ಟ ಗ್ರಾಮವು ಬಾಪುವಿನ ಉಪ್ಪಿನ ಸತ್ಯಾಗ್ರಹದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.