ಒಂದೇ ದಿನ 100 ಜನ ಮಹಾಮಾರಿಗೆ ಬಲಿ : ಶವ ಸುಡಲು ಎದುರಾದ ಕಟ್ಟಿಗೆ ಸಮಸ್ಯೆ
ಮಧ್ಯಪ್ರದೇಶದ ಭೋಪಾಲ್ನಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಶವಾಗಾರದಲ್ಲಿ ಅಂತ್ಯಕ್ರಿಯೆಗೆ ಸ್ಥಳಾವಕಾಶವಿಲ್ಲದ ಪರಿಸ್ಥಿತಿ ಬಂದೊದಗಿದೆ. ಭದಭದಾ ಘಾಟ್ನಲ್ಲಿ ಶನಿವಾರ 118 ಶವಗಳನ್ನು ಅಂತ್ಯಕ್ರಿಯೆ ಮಾಡಲಾಗಿದೆ. ಅದರಲ್ಲಿ 100 ಜನ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಅರಣ್ಯ ಇಲಾಖೆ ಪ್ರತಿದಿನ 2 ರಿಂದ 3 ಲಾರಿ ಕಟ್ಟಿಗೆಗಳನ್ನು ಒದಗಿಸುತ್ತಿದ್ದರೂ ಸಹ ಅಂತ್ಯಕ್ರಿಯೆಗೆ ಕಟ್ಟಿಗೆ ಅಭಾವ ಎದುರಾಗಿದೆ.