ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಾಗಿದೆ ಎಂದು ತಿಳಿಯಲು ಕುದುರೆಗಾಡಿಯಲ್ಲಿ ಬಂದ ವ್ಯಕ್ತಿ ! - ದೇಶದಲ್ಲಿ ಪ್ರತಿದಿನ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ
ಅಮರಾವತಿ: ದೇಶದಲ್ಲಿ ನಿತ್ಯ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಪೆಟ್ರೋಲ್ 120 ರೂ.ಗಳ ಗಡಿ ತಲುಪಿದ್ದು ಡೀಸೆಲ್ ನೂರರ ಗಡಿ ದಾಟಿದೆ. ಇದರಿಂದ ಸಾಮಾನ್ಯ ನಾಗರಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಸಾಮಾನ್ಯ ಜನರನ್ನು ಹೈರಾಣಾಗಿಸಿದೆ. ಪರಿಣಾಮ ಇಲ್ಲೊಬ್ಬರು ಪೆಟ್ರೋಲ್ - ಡೀಸೆಲ್ ಬೆಲೆ ಕೇಳಲು ಗುರುವಾರ ರಾತ್ರಿ ಇರ್ವಿನ್ ಚೌಕ್‌ನಲ್ಲಿರುವ ಪೆಟ್ರೋಲ್ ಪಂಪ್‌ಗೆ ಕುದುರೆಗಾಡಿಯಲ್ಲಿ ಬಂದಿದ್ದಾರೆ. ಈ ವಿಡಿಯೋ ಏರುತ್ತಿರುವ ಇಂಧನ ವ್ಯವಸ್ಥೆಯನ್ನು ಅಣಕ ಮಾಡುವಂತಿದೆ.
Last Updated : Feb 3, 2023, 8:21 PM IST