ಹೈದರಾಬಾದ್: ದೇಹವನ್ನು ಕ್ರಿಯಾಶೀಲವಾಗಿಡುವ ಅತ್ಯುತ್ತಮ ವ್ಯಾಯಾಮ ವಿಧಾನದಲ್ಲಿ ಸೈಕಲಿಂಗ್ ಪ್ರಮುಖವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ಕೂಡ ಸೈಕಲಿಂಗ್ನಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂಬುದನ್ನು ಒಪ್ಪಿದ್ದಾರೆ. ಇದೇ ಹಿನ್ನಲೆ ಈ ಸೈಕಲಿಂಗ್ಗೆ ಉತ್ತೇಜನ ನೀಡುವ ಹಿನ್ನಲೆ ವಿಶ್ವ ಬೈಸಿಕಲ್ ದಿನವನ್ನು ಜೂನ್ 3ರಂದು ಜಾಗತಿಕವಾಗಿ ಪರಿಗಣಿಸಲಾಗಿದೆ. ಈ ದಿನದ ಮೂಲ ಉದ್ದೇಶ ಎಂದರೆ, ಸೈಕಲಿಂಗ್ ಪರಿಸರಕ್ಕೆ ಹೇಗೆ ಹಾನಿಕಾರಕವಲ್ಲ ಎಂಬುದನ್ನು ತಿಳಿಸುವ ಜೊತೆಗೆ ಇದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನ ನೀಡಲಿದೆ ಎಂಬುದು ತಿಳಿಸುವುದಾಗಿದೆ.
ಇಂದಿಗೂ ಕೂಡ ಸೈಕಲಿಂಗ್ ಅಭ್ಯಾಸ ಹೊಂದಿರುವ ಮುಂದಿ ಆರೋಗ್ಯಯುತವಾಗಿದ್ದಾರೆ. ಇದು ತೂಕ ಮಾತ್ರವಲ್ಲದೇ, ಸ್ನಾಯುಗಳ ಬಲಗೊಳಿಸಲು ಸಹಾಯ ಮಾಡುತ್ತದೆ. ಸೈಕ್ಲಿಂಗ್ ದೇಹಕ್ಕೆ ನೇರವಾಗಿ ಮತ್ತು ಪರೋಕ್ಷವಾಗಿ ಅನೇಕ ಲಾಭ ನೀಡುತ್ತದೆ. ಮೊದಲಿಗೆ, ಇದು ದೇಹವನ್ನು ಫಿಟ್ ಆಗಿಡುವ ಜೊತೆಗೆ ತೂಕ ನಿರ್ವಹಣೆಗೆ ಸಹಾಯವಾಗುತ್ತದೆ. ಇದು ಹೃದಯಾಘಾತ ಮತ್ತು ಮಧುಮೇಹ ನಿರ್ವಹಣೆ ಅಪಾಯವನ್ನು ತಡೆಯುತ್ತದೆ.
2018ರ ಏಪ್ರಿಲ್ನಲ್ಲಿ ವಿಶ್ವ ಸಂಸ್ಥೆ ಸಾಮಾನ್ಯ ಸಭೆಯಲ್ಲಿ ಜೂನ್ 3ರಂದು ವಿಶ್ವ ಬೈಸಿಕಲ್ ದಿನವನ್ನಾಗಿ ಆಚರಣೆಯನ್ನು ಘೋಷಿಸಲಾಗಿದೆ. ಅಂದಿನಿಂದ ಈ ದಿನವನ್ನು ಜಾಗತಿನಾದ್ಯಮತ ಆಚರಣೆ ಮಾಡಲಾಗುತ್ತಿದೆ. ತಂತ್ರಜ್ಞಾನದ ಅಭಿವೃದ್ಧಿ, ವಾಹನಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದು ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಜೊತೆಗೆ ವಾಹನಗಳು ಪೆಟ್ರೋಲ್ ಮತ್ತು ಡಿಸೇಲ್ ಗಳಿಂದ ಮಾಲಿನ್ಯ ಹೆಚ್ಚಿಸುತ್ತದೆ. ಆದರೆ, ಈ ಬೈಸಿಕಲ್ಗಳು ಪರಿಸರಕ್ಕೆ ಹೆಚ್ಚು ಪೂರಕವಾಗಿದೆ.