ದೀರ್ಘಕಾಲದ ಸಂಬಂಧದಲ್ಲಿ ದಂಪತಿಯ ನಡುವೆ ಭಾವನಾತ್ಮಕತೆ ದೂರವಾಗುತ್ತದೆ. ಈ ಮೂಲಕ ಪರಸ್ಪರರ ನಡುವೆ ಪ್ರೀತಿ ಕಡಿಮೆಯಾಗುತ್ತದೆ ಎಂಬ ಅಂಶ ಅಧ್ಯಯನದಿಂದ ಗೊತ್ತಾಗಿದೆ.
ಹೀಗಿದ್ದರೂ, ದಂಪತಿ ಒಬ್ಬರಿಗೊಬ್ಬರು ಒಟ್ಟಿಗಿರಲು, ಜೀವನ ಮತ್ತು ಕುಟುಂಬದ ಎಲ್ಲಾ ಜವಾಬ್ದಾರಿಗಳನ್ನು ಒಟ್ಟಾಗಿ ನಿರ್ವಹಿಸಲು ಒಗ್ಗಿಕೊಳ್ಳುತ್ತಾರೆ. ಆದರೆ, ಅವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ಅಗತ್ಯತೆಯ ಕಡೆಗೆ ಗಮನಹರಿಸುವುದಿಲ್ಲ. ಇದರ ಪರಿಣಾಮವಾಗಿ ಅತೃಪ್ತಿ, ಹತಾಶೆ ಮತ್ತು ಏಕತಾನತೆಯು ಸಂಬಂಧಗಳಲ್ಲಿ ಬೆಳೆಯುತ್ತವೆ.
ಮದುವೆಯಾದ ಕೆಲವು ವರ್ಷಗಳ ನಂತರ ಅನೇಕ ಬಾರಿ ದಂಪತಿ ಭಾವನಾತ್ಮಕವಾಗಿ ದೂರವಾಗುತ್ತಾರೆ. ಪರಸ್ಪರರ ನಡುವೆ ನಂಬಿಕೆ, ತಿಳುವಳಿಕೆ ಕಡಿಮೆಯಾಗುತ್ತದೆ. ಪರಿಣಾಮ ಇದು ಜಗಳ, ವಾದಕ್ಕೂ ದಾರಿಯಾಗುತ್ತದೆ.
ಗಂಡ ಮತ್ತು ಹೆಂಡತಿ ಇಬ್ಬರೂ ತಮ್ಮ ಸಂಗಾತಿ ತಮ್ಮಂತೆ ಯೋಚಿಸುವಂತೆ, ವರ್ತಿಸುವಂತೆ ಬಯಸಿದಾಗ ಸಂಬಂಧದಲ್ಲಿ ಅನೇಕ ಸಮಸ್ಯೆಗಳು ಏರ್ಪಡುತ್ತವೆ ಎಂದು ಸಂಬಂಧ ಸಲಹೆಗಾರ ರಚನಾ ಮಹೇಶ್ವರಿ ಹೇಳುತ್ತಾರೆ.
ಮದುವೆಯಾದ ಆರಂಭದ ವರ್ಷಗಳಲ್ಲಿ ಜವಾಬ್ದಾರಿಗಳು ಕಡಿಮೆ ಇರುತ್ತವೆ. ದಂಪತಿ ಪರಸ್ಪರರ ನಡುವೆ ವಿಚಾರ ವಿನಿಮಯಕ್ಕೆ ಸಾಕಷ್ಟು ಸಮಯ ಪಡೆಯುತ್ತಾರೆ. ಈ ಸಮಯದಲ್ಲಿ ಅವರು ಹೆಚ್ಚು ಲೈಂಗಿಕವಾಗಿ ಸಕ್ರಿಯರಾಗಿರುತ್ತಾರೆ. ಆದರೆ, ಸಮಯ ಕಳೆದಂತೆ ದಿನನಿತ್ಯದ ಜೀವನದ ಜವಾಬ್ದಾರಿಗಳು, ಮಕ್ಕಳನ್ನು ಬೆಳೆಸುವುದು ಮತ್ತು ಸಂಬಂಧಿಕರೊಂದಿಗೆ ಸಂಬಂಧಗಳನ್ನು ಕಾಪಾಡಿಕೊಳ್ಳುವುದು ಸವಾಲಾಗುತ್ತದೆ.
ಸಮಯದೊಂದಿಗೆ ಸಂಬಂಧ ಬದಲಾಗುತ್ತದೆ:
ಮದುವೆಯಾದ ಹೊಸತರಲ್ಲಿ ದಂಪತಿ ತಮ್ಮ ನಡುವೆ ಪರಸ್ಪರರ ಇಷ್ಟ ಮತ್ತು ಇಷ್ಟಪಡದಿರುವಿಕೆ ಮತ್ತು ಪರಸ್ಪರ ಬಾಂಧವ್ಯವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವು ವರ್ಷಗಳ ನಂತರ ಅವರಿಗೆ ಎಲ್ಲವೂ ಅರ್ಥಹೀನವೆಂದು ತೋರುತ್ತದೆ. ಇದು ಕ್ರಮೇಣ ಅವರ ನಡುವಿನ ಭಾವನಾತ್ಮಕ ಅಂತರವನ್ನು ರೂಪಿಸಬಲ್ಲದು.