ಕೋವಿಡ್ನ ದೀರ್ಘಕಾಲದ ಅಪಾಯಗಳು ಎಲ್ಲೆಡೆ ಒಂದೇ ರೀತಿ ಆಗಿರುವುದಿಲ್ಲ. ವೈವಿಧ್ಯತೆಯ ಜನಸಂಖ್ಯೆಗೆ ಅನುಗುಣವಾಗಿ ರೋಗಲಕ್ಷಣವೂ ವಿಭಿನ್ನವಾಗಿರುತ್ತದೆ ಎಂದು ಹೊಸ ಅಧ್ಯಯನ ತಿಳಿಸಿದೆ. ನೇಚರ್ ಕಮ್ಯುನಿಕೇಷನ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ರೋಗ ನಿರ್ಣಯ ಮತ್ತು ಚಿಕಿತ್ಸೆಯನ್ನು ಸುಧಾರಿಸಲು ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದಿದೆ.
ದೀರ್ಘ ಕೋವಿಡ್ ತುಂಬಾ ಕ್ಲಿಷ್ಟವಾಗಿದ್ದು, ಅನೇಕ ಸಮಸ್ಯೆಗಳನ್ನು ಹೊಂದಿದೆ ಎಂದು ಅಧ್ಯಯನದ ಪ್ರಮುಖ ಲೇಖಕರಾಗಿರುವ ಚೆಂಗ್ಸಿ ಜಾಂಗ್ ತಿಳಿಸಿದ್ದಾರೆ. ಇದು ಅನೇಕ ಅಂಗಗಳಿಗೆ ಹಾನಿ ಮಾಡುತ್ತದೆ. ಪ್ರಸ್ತುತ ಸಮಾಜದಲ್ಲಿ ಹೆಚ್ಚಿನ ಒತ್ತಡ ಉಂಟು ಮಾಡುತ್ತಿದೆ. ರೋಗವನ್ನು ವ್ಯಾಖ್ಯಾನಿಸುವುದು ಕಷ್ಟ. ವಿವಿಧ ಜನಸಂಖ್ಯೆಗೆ ಹೇಗೆ ಒಂದೇ ವ್ಯಾಖ್ಯಾನ ಅನ್ವಯಿಸುತ್ತದೆ ಎಂಬುದು ನಿರ್ಧರಿಸುವ ಅವಶ್ಯಕತೆ ಎದುರಾಗಿದೆ ಎಂದಿದ್ದಾರೆ.
ಎರಡು ಕ್ಲಿನಿಕಲ್ ರಿಸರ್ಚ್ನಿಂದ ಎರಡು ತಂಡ ಎಲೆಕ್ಟ್ರಾನಿಕ್ ಹೆಲ್ತ್ ರೆಕಾರ್ಡ್ ಅಧ್ಯಯನ ನಡೆಸಿದ್ದಾರೆ. ಇದರಲ್ಲಿ ಒಂದರಲ್ಲಿ 11 ಮಿಲಿಯನ್ ನ್ಯೂಯಾರ್ಕ್ ರೋಗಿಗಳ ದತ್ತಾಂಶ ಹೊಂದಿದ್ದರೆ, ಮತ್ತೊಂದರಲ್ಲಿ ಫ್ಲೋರಿಡಾ, ಜಾರ್ಜಿಯಾ ಮತ್ತು ಅಲಬಮಾದ 16.8 ಮಿಲಿಯನ್ ಜನರ ದತ್ತಾಂಶ ಹೊಂದಿತ್ತು. ಸೋಂಕಿತರಲ್ಲದ ವ್ಯಕ್ತಿಗಳಿಗೆ ಹೋಲಿಸಿದರೆ ಇತ್ತೀಚೆಗೆ ಕೋವಿಡ್‌ಗೆ ತುತ್ತಾದ ರೋಗಿಗಳಲ್ಲಿ ಹೆಚ್ಚಾಗಿ ಸಂಭವಿಸುವ ರೋಗನಿರ್ಣಯಗಳ ಪಟ್ಟಿಯನ್ನು ತಂಡ ರಚಿಸಿದೆ.
ಫ್ಲೋರಿಡಾಕ್ಕಿಂತ ನ್ಯೂಯಾರ್ಕ್ ನಗರದಲ್ಲಿ ಹೆಚ್ಚಿನ ರೀತಿಯ ರೋಗಲಕ್ಷಣಗಳು ಮತ್ತು ದೀರ್ಘ ಕೋವಿಡ್ ಅಪಾಯ ಹೊಂದಿರುವುದು ಸಂಶೋಧನೆಯಲ್ಲಿ ಪತ್ತೆಯಾಗಿದೆ. ನ್ಯೂಯಾರ್ಕ್ ನಗರ ಮತ್ತು ಫ್ಲೋರಿಡಾ ಕೋವಿಡ್ ರೋಗಿಗಳಲ್ಲಿ ಬುದ್ಧಿಮಾಂದ್ಯತೆ, ಕೂದಲು ಉದುರುವಿಕೆ, ಹೊಟ್ಟೆ ಮತ್ತು ಸಣ್ಣ ಕರುಳಿನಲ್ಲಿ ಹುಣ್ಣುಗಳು, ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟುವಿಕೆ, ಎದೆ ನೋವು, ಅಸಹಜ ಹೃದಯ ಬಡಿತ ಮತ್ತು ಆಯಾಸ ಸೇರಿವೆ ಎಂದು ಅವರು ಹೇಳಿದ್ದಾರೆ.
ನಮ್ಮ ತಂಡ ಎಲೆಕ್ಟ್ರಾನಿಕ್ ಹೆಲ್ತ್ ರೆಕಾರ್ಡ್ನೊಂದಿಗೆ ಮೆಷಿನ್ ಲರ್ನಿಂಗ್ ಕೂಡ ಬಳಸಿದೆ. ಇದರ ಜೊತೆಗೆ ಡೇಟಾಚಾಲಿತ ಮಾರ್ಗವನ್ನು ಒದಗಿಸುವ ಮೂಲಕ ಕೋವಿಡ್ ವ್ಯಾಖ್ಯಾನಿಸಲು ಮುಂದಾಗಿದೆ. ದಾಖಲೆಗಳನ್ನು ವೈವಿಧ್ಯಮಯ ಜನಸಂಖ್ಯೆಯಾದ್ಯಂತ ಹೋಲಿಸುವುದು ರೋಗಿಗಳಿಗೆ ಕೋವಿಡ್ ಎಷ್ಟು ವಿಭಿನ್ನ, ದೀರ್ಘವಾಗಿದೆ ಎಂದು ತೋರಿಸಿದೆ. ಫ್ಲೋರಿಡಾಗೆ ಹೋಲಿಕೆ ಮಾಡಿದರೆ ನ್ಯೂಯಾರ್ಕ್ನ ಹೆಚ್ಚಿನ ಜನಸಂಖ್ಯೆ ಜನರು ಕೋವಿಡ್‌ಗೆ ತುತ್ತಾಗಿದ್ದಾರೆ. ಮೊದಲ ಅಲೆಯಲ್ಲಿ ಅವರು ಮಾಸ್ಕ್ನಂತಹ ವೈಯಕ್ತಿಕ ಸುರಕ್ಷತಾ ಸಾಧನಗಳಿಂದ ವಂಚಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.
ದೀರ್ಘ ಕೋವಿಡ್ ಲಕ್ಷಣಗಳೇನು?:ಕೋವಿಡ್ ಸೋಂಕಿಗೆ ತುತ್ತಾದ ವ್ಯಕ್ತಿಯಲ್ಲಿ ಸೋಂಕು ನಿವಾರಣೆ ಆದ ಬಳಿಕ ದೀರ್ಘ ಕಾಲದವರೆಗೆ ಬ್ರೈನ್ ಫಾಗ್, ತಲೆನೋವು, ಆಯಾಸ, ಕೂದಲು ಉದುರುವಿಕೆ ಅಥವಾ ವಾಸನೆ ಕಳೆದುಕೊಳ್ಳುವುದನ್ನು ಕಾಣುತ್ತಿದ್ದೇವೆ.
ಇದನ್ನೂ ಓದಿ: ಕೋವಿಡ್ 19 ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯಲ್ಲ; ಡಬ್ಲ್ಯೂಎಚ್ಒ