ಭಾರತದಲ್ಲಿ, ‘ವಿಷವು ವಿಷವನ್ನು ಕೊಲ್ಲುತ್ತದೆ’ ಎಂದು ನಾವು ಹೇಳುತ್ತೇವೆ. ರೋಗಾಣುಗಳಿಂದ ರಕ್ಷಣೆ ಪಡೆಯಲು ಬಳಸುವ ಲಸಿಕೆಗಳನ್ನು ತಯಾರಿಸಲು ರೋಗ ಉತ್ಪಾದಿಸುವ ಸೂಕ್ಷ್ಮಜೀವಿಗಳನ್ನು ಬಳಸುವ ತತ್ವವನ್ನು ಅನುಸರಿಸಲಾಗುತ್ತದೆ. ಉದಾಹರಣೆಗೆ: ದಡಾರ ಮತ್ತು ಪೋಲಿಯೊ ವೈರಸ್‌ಗಳನ್ನು ದಡಾರ ಮತ್ತು ಪೋಲಿಯೊ ವಿರುದ್ಧ ರಕ್ಷಣೆ ನೀಡುವ ಲಸಿಕೆಗಳನ್ನು ತಯಾರಿಸಲು ಸಂಸ್ಕರಿಸಲಾಗುತ್ತದೆ. ಅಂತೆಯೇ, ಡಿಫ್ತಿರಿಯಾ, ವೂಪಿಂಗ್ ಕಾಫ್ ಟೆಟನಸ್ (ಡಿಪಿಟಿ), ಕ್ಷಯ (ಬಿಸಿಜಿ), ರೇಬೀಸ್ ಇತ್ಯಾದಿ ಲಸಿಕೆಗಳ ಬಗ್ಗೆ ನಿಮಗೆ ತಿಳಿದಿದೆ.
ಡಾ. ರಾಜೇಶ್ ಷಾ, ಹೋಮಿಯೋಪತಿ ಸಂಶೋಧಕ ಮತ್ತು ಶಿಕ್ಷಣ ತಜ್ಞರಾಗಿರುವ ಇವರು ಮುಂಬೈನ ಲೈಫ್ ಫೋರ್ಸ್ ಹೋಮಿಯೋಪತಿ ಮತ್ತು ಬಯೋಸಿಮಿಲಿಯಾ ಮುಖ್ಯಸ್ಥರೂ ಆಗಿದ್ದಾರೆ. ಎರಡು ದಶಕಗಳಿಂದ ಹೊಸ ನೋಸೋಡ್‌ಗಳು ಮತ್ತು ಇತರ ಹೋಮಿಯೋಪತಿ ಔಷಧಗಳನ್ನು ಅಭಿವೃದ್ಧಿಪಡಿಸುವಲ್ಲಿ ಇವರು ಶ್ರಮಿಸುತ್ತಿದ್ದಾರೆ. ಇವರು ವಿಶ್ವದ ಮೊದಲ ಕೋವಿಡ್-19 ನೋಸೋಡ್ ಅನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿದ್ದಾರೆ ಮತ್ತು ಅದರ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡುವ ಪೂರ್ವ-ಕ್ಲಿನಿಕಲ್ ಮತ್ತು ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಿದ್ದಾರೆ.
ಹೋಮಿಯೋಪತಿ ಮತ್ತು ಲಸಿಕೆಯ ನಡುವಿನ ಸಾಮ್ಯತೆ ಏನು ಗೊತ್ತಾ..? ಈ ಎರಡನ್ನೂ 1796 ರಲ್ಲಿ ಜಗತ್ತಿಗೆ ಪರಿಚಯಿಸಲಾಯಿತು. ಹೋಮಿಯೋಪತಿಯನ್ನು ಜರ್ಮನಿಯ ಡಾ. ಸ್ಯಾಮ್ಯುಯೆಲ್ ಹ್ಯಾನೆಮನ್ ಮತ್ತು ಲಸಿಕೆಯನ್ನು ಇಂಗ್ಲೆಂಡ್ನ ಡಾ. ಎಡ್ವರ್ಡ್ ಜೆನ್ನರ್ ಪರಿಚಯಿಸಿದರು. ಹೋಮಿಯೋಪತಿ ಮತ್ತು ಲಸಿಕೆ ಎರಡೂ ಒಂದೇ ರೀತಿಯ ಮೂಲ ತತ್ತ್ವವನ್ನು ಆಧರಿಸಿವೆ.
ಹೋಮಿಯೋಪತಿಯಲ್ಲಿ, ಬ್ಯಾಕ್ಟೀರಿಯಗಳಾದ (ಕ್ಷಯ, ಗೊನೊರಿಯಾ, ಸಿಫಿಲಿಸ್, ಸ್ಟ್ರೆಪ್ಟೋಕೊಕಿ, ಸ್ಟ್ಯಾಫಿಲೋಕೊಸ್ಸಿ), ವೈರಸ್‌ಗಳಾದ (ಸಿಡುಬು, ದಡಾರ, ರೇಬೀಸ್) ಮತ್ತು ಪರಾವಲಂಬಿಗಳಾದ (ಸ್ಕೇಬೀಸ್, ಶಿಲೀಂಧ್ರ, ಮಲೇರಿಯಾ) ಇವುಗಳಿಂದ ತಯಾರಿಸಿದ 50 ಕ್ಕೂ ಹೆಚ್ಚು ಔಷಧಿಗಳಿವೆ. ಇವುಗಳನ್ನು ‘ನೋಸೋಡ್ಸ್’ ಎಂದು ಕರೆಯಲಾಗುತ್ತದೆ. ನೋಸೋಡ್‌ಗಳು ಮತ್ತು ಲಸಿಕೆಗಳು ಒಂದೇ ತತ್ತ್ವವನ್ನು ಆಧರಿಸಿವೆ. ಆದರೆ ಅವುಗಳನ್ನು ವಿಭಿನ್ನವಾಗಿ ತಯಾರಿಸಲಾಗುತ್ತದೆ. ಲಸಿಕೆಗಳನ್ನು ಅಟೆನ್ಯೂಯೇಷನ್ ಮೂಲಕ ಸೂಕ್ಷ್ಮಜೀವಿಗಳನ್ನು ದುರ್ಬಲಗೊಳಿಸಿ ತಯಾರಿಸಲಾಗುತ್ತದೆ. ಆದರೆ ನೋಸೋಡ್‌ಗಳನ್ನು ಒಂದು ವಿಶಿಷ್ಟ ವಿಧಾನದ ಮೂಲಕ ತಯಾರಿಸಲಾಗುತ್ತದೆ. ಔಷಧಗಳನ್ನು ಬಳಕೆಗೆ ಸುರಕ್ಷಿತವಾಗಿಸುವುದು ಅಟೆನ್ಯೂಯೇಷನ್ ಮತ್ತು ಪೊಟೆಂಟೈಸೇಶನ್ ಪ್ರಮುಖ ಉದ್ದೇಶ. ಇವು ಸೋಂಕುಗಳ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಪರಿಣಾಮಕಾರಿಯಾಗಿದೆ. ಇವುಗಳನ್ನು ಅವಳಿ ಔಷಧಗಳು ಎಂದು ಕರೆಯಲಾಗುತ್ತದೆ.
ಲಸಿಕೆಗಳನ್ನು ಅದೇ ಸೋಂಕಿನ ವಿರುದ್ಧ ತಡೆಗಟ್ಟುವಿಕೆಯಾಗಿ ಬಳಸಲಾಗುತ್ತದೆ. ಉದಾಹರಣೆಗೆ, ದಡಾರವನ್ನು ತಡೆಗಟ್ಟಲು ದಡಾರ ವೈರಸ್ ಲಸಿಕೆಯನ್ನು ಬಳಸಲಾಗುತ್ತದೆ. ಆದರೆ, ಹೋಮಿಯೋಪತಿಯಲ್ಲಿ ನೋಸೋಡ್‌ಗಳ ಬಳಕೆಯನ್ನು ಒಂದೇ ಸೋಂಕಿಗೆ ಸೀಮಿತಗೊಳಿಸಲಾಗಿಲ್ಲ. ಹೋಮಿಯೋಪತಿ ಹೋಲಿಕೆಯ ತತ್ತ್ವದ ಆಧಾರದ ಮೇಲೆ ಅವುಗಳನ್ನು ಅನೇಕ ರೋಗಗಳ ವಿರುದ್ಧ ಬಳಸಲಾಗುತ್ತದೆ. ಉದಾಹರಣೆಗೆ, ಮೈಗ್ರೇನ್, ಕೊಲೈಟಿಸ್ ಮತ್ತು ಸಂಧಿವಾತದ ವಿರುದ್ಧ ಟಿಬಿ ರೋಗಾಣುಗಳಿಂದ ತಯಾರಿಸಿದ ನೋಸೋಡ್ ಅನ್ನು ಬಳಸಲಾಗುತ್ತದೆ.