ಕರ್ನಾಟಕ

karnataka

By

Published : Jun 23, 2023, 2:50 PM IST

ETV Bharat / sukhibhava

ನಿಮಗಿದು ಗೊತ್ತೇ? ಆರೋಗ್ಯಕರ ಗುಣಗಳೊಂದಿಗೆ ಸೌಂದರ್ಯ ವರ್ಧಕವಾಗಿಯೂ ಕಬ್ಬು ಬಳಕೆ

ಕಬ್ಬಿನ ರಸ ಆರೋಗ್ಯಕರ ಗುಣಗಳನ್ನು ಹೊಂದಿದೆ. ಅದರ ಜೊತೆಗೆ ಸೌಂದರ್ಯವರ್ಧಕವಾಗಿಯೂ ಬಳಕೆಯಾಗುತ್ತಿದೆ.

use-of-sugarcane-as-a-beauty-enhancer-there-are-many-benefits
use-of-sugarcane-as-a-beauty-enhancer-there-are-many-benefits

ಬೇಸಿಗೆ ಬಂದಾಕ್ಷಣ ಕಬ್ಬಿನ ಜ್ಯೂಸ್‌ಗೆ ಬೇಡಿಕೆ ಹೆಚ್ಚು​. ಇದು ಬಿರುಬಿಸಲಿಂದ ಉಂಟಾಗುವ ದೇಹದ ದಾಹ ನೀಗಿಸುತ್ತದೆ. ಆರೋಗ್ಯಕ್ಕೆ ಬೇಕಿರುವ ಅಗತ್ಯ ಪೋಷಕಾಂಶಗಳನ್ನೂ ಒದಗಿಸುತ್ತದೆ. ಇದನ್ನು ಹೊರತುಪಡಿಸಿದಂತೆ ಕಬ್ಬಿನಿಂದ ಹಲವು ಪ್ರಯೋಜನಗಳಿವೆ. ಇದೇ ಕಬ್ಬಿನ ರಸವನ್ನು ಸೌಂದರ್ಯ ವರ್ಧಕಗಳಾಗಿಯೂ ಉಪಯೋಗಿಸುವುದರ ಬಗ್ಗೆ ನಿಮಗೆ ಗೊತ್ತೇ?. ಈ ವಿಚಾರ ಕೇಳಿದಾಕ್ಷಣ ಅಚ್ಚರಿ ಯಾದರೂ ಇದರ ಲಾಭ ತಿಳಿದ ಮೇಲೆ ಒಪ್ಪಿಕೊಳ್ಳದೆ ಇರಲಾರಿರಿ.

ಕಬ್ಬಿನ ರಸವನ್ನು ಮುಖದ ಮೇಲೆ ಹಚ್ಚಿ, ಹತ್ತು- ಹದಿನೈದು ನಿಮಿಷದ ಬಳಿಕ ತಣ್ಣೀರಿನಲ್ಲಿ ಮುಖ ತೊಳೆಯಿರಿ. ಮುಖದಲ್ಲಿನ ಆ್ಯಂಟಿ ಬ್ಯಾಕ್ಟೀರಿಯಲ್​ ಅಂಶವನ್ನು ಇದು ತಡೆಯುತ್ತದೆ. ಇದರಿಂದ ಮೊಡವೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇದರಲ್ಲಿನ ಅಲ್ಫಾ ಹೈಡ್ರಾಕ್ಸಿ ಆಮ್ಲ ಕಪ್ಪು ವರ್ತುಲ ಮತ್ತು ಬಿಳಿ ವರ್ತುಲವನ್ನು ನಿವಾರಣೆ ಮಾಡುವುದರೊಂದಿಗೆ ಮೊಡವೆಯ ಕಲೆಯನ್ನೂ ಹೋಗಲಾಡಿಸುತ್ತದೆ.

ಕಬ್ಬಿನ ರಸದಲ್ಲಿ ಗ್ಲಕೊಲಿಕ್​ ಆಮ್ಲ ಹೆಚ್ಚಿದೆ. ಚರ್ಮ ಒಣ, ಶುಷ್ಕತೆ ಅನುಭವಿಸುತ್ತಿದೆ ಎಂದರೆ ಈ ರಸವನ್ನು ಹಚ್ಚಿಕೊಳ್ಳಿ. ಇದು ಡಲ್​ ಎನಿಸುವ ತ್ವಚೆಗೆ ಅಗತ್ಯ ತೇವಾಂಶ ನೀಡಿ, ಆರೋಗ್ಯಯುತವನ್ನಾಗಿ ಮಾಡುತ್ತದೆ. ಇದರಲ್ಲಿ ಪ್ರೋಟಿನ್​, ಮಿನರಲ್ಸ್​, ಐರನ್​, ಜಿಂಕ್​, ಪೋಟಾಶಿಯಂ, ಆ್ಯಂಟಿಆಕ್ಸಿಡೆಂಟ್​ ಮತ್ತು ಫ್ಲೆವನೊಯ್ಡ್​​ ಕಡಿಮೆ ಮಾಡುತ್ತದೆ. ರಾಡಿಕಲ್​ ಅನ್ನೂ ಕಡಿಮೆ ಮಾಡುತ್ತದೆ. ಇದರಲ್ಲಿನ ವಿಟಮಿನ್​ ಸಿ ಮುಖದ ಸುಕ್ಕು ಮತ್ತು ಗೆರೆಗಳನ್ನು ನಿರ್ಮೂಲನೆ ಮಾಡುವುದು.

ತ್ವಚೆ ಮಾತ್ರವಲ್ಲ, ಕೂದಲಿನ ಅಂದಕ್ಕೂ ಇದು ಸಹಾಯಕ. ಕಬ್ಬಿನ ರಸವನ್ನು ಕೂದಲ ಬುಡಕ್ಕೆ ಶ್ಯಾಂಪೂವಾಗಿ ಬಳಸಿ, ಮೃದುವಾಗಿ ಮಸಾಜ್​ ಮಾಡಿ ಒಂದೆರಡು ನಿಮಿಷದ ಬಳಿಕ ತಣ್ಣೀರಿನಲ್ಲಿ ಕೂದಲು ತೊಳೆಯಿತು. ಇದರಲ್ಲಿನ ವಿಟಮಿನ್​, ಮಿನರಲ್ಸ್​ ಮತ್ತು ಅಮಿನೊ ಆಮ್ಲಗಳು ಕೂದಲಿಗೆ ಪೋಷಕಾಂಶ ನೀಡಿ, ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದು ನೈಸರ್ಗಿಕ ಕಂಡಿಷನರ್‌ನಂತೆ ಬಳಕೆ ಯಾಗುವ ಹಿನ್ನೆಲೆಯಲ್ಲಿ ಕೂದಲಿಗೆ ತೇವಾಂಶ ನೀಡಿ, ಹೊಳೆಯುವಂತೆ ಮಾಡುತ್ತೆ. ಪಿಹೆಚ್​​ ಮಟ್ಟ ನಿಯಂತ್ರಣಕ್ಕೆ ಸಹಾಯ ಮಾಡುವುದರೊಂದಿಗೆ ತಲೆ ಹೊಟ್ಟಿನ ಸಮಸ್ಯೆ ದೂರ ಮಾಡುತ್ತದೆ.

ವಯಸ್ಸಾಗುವಿಕೆಗೆ ತಡೆ: ವಯಸ್ಸಾಗುವಿಕೆಯನ್ನು ನಡೆಯುವಲ್ಲಿ ಇದು ಪ್ರಮುಖವಾಗಿ ಕಾರ್ಯ ನಿರ್ವಹಿಸುತ್ತದೆ. ತ್ವಚೆಯನ್ನು ಮೃದುಗೊಳಿಸುವ ಜೊತೆಗೆ ಆಂತರಿಕವಾಗಿ ಹೊಳೆಯುವಂತೆ ಮಾಡುತ್ತದೆ. ಗ್ಲೈಕೊಲಿಕ್​ ಆಮ್ಲಗಳು ತ್ವಚೆಯನ್ನು ಹೊಳೆಯಿಸುತ್ತದೆ.

ಕಬ್ಬಿನ ರಸದಲ್ಲಿ ನೈಸರ್ಗಿಕ ಸುಕ್ರೋಸ್​ ಇದ್ದು, ಇದು ಶಕ್ತಿಯ ಮೂಲ. ಇದು ನಷ್ಟವಾದ ಸಕ್ಕರೆ ಮಟ್ಟವನ್ನು ಮರು ಪಡೆಯಲು ಗ್ಲೂಕೋಸ್​ ಬಿಡುಗಡೆ ಮಾಡುತ್ತದೆ. ದೇಹವನ್ನು ಹೈಡ್ರೇಟ್​ ಮಾಡಿ, ಆಲಸ್ಯವನ್ನೂ ಹೊಡೆದೊಡಿಸಬಲ್ಲದು. ಜಾಂಡಿಸ್​ ವಿರುದ್ಧ ಹೋರಾಡಲು ಕೂಡ ಇದು ಮುಖ್ಯ. ಆಯುರ್ವೇದದ ಅನುಸಾರ ಯಕೃತ್​​ಗೆ ಶಕ್ತಿಯನ್ನು ನೀಡುತ್ತದೆ. ಇದರಲ್ಲಿರುವ ಆ್ಯಂಟಿ ಆಕ್ಸಿಂಡೆಟ್​​ ಯಕೃತ್​ ಸೋಂಕಿನ ವಿರುದ್ಧ ಹೋರಾಡುತ್ತದೆ.

ಇದನ್ನೂ ಓದಿ: ಸನ್​ಸ್ಕ್ರೀನ್​ ಬಳಕೆಯ ಅಗತ್ಯವೇನು?

ABOUT THE AUTHOR

...view details