ಹೈದರಾಬಾದ್: ಪರಿಸರ ಮಾಲಿನ್ಯ ಮತ್ತು ಸಿಗರೇಟ್ ಹೊಗೆ ಶ್ವಾಸಕೋಶದ ಅಪಾಯಕಾರಿ ಕಾಯಿಲೆಗಳಿಗೆ ಕಾರಣವಾಗಬಹುದು. ದೇಹದಲ್ಲಿನ ಶ್ವಾಸಕೋಶಗಳಿಗೆ ಉಸಿರಾಡಲು ಆಹಾರದ ಅಗತ್ಯವಿದೆ. ಜೊತೆಗೆ ಶ್ವಾಸಕೋಶದ ಆರೋಗ್ಯಕ್ಕಾಗಿ, ಕೆಲವು ಆಹಾರಗಳನ್ನು ಸೇವಿಸಬೇಕು.
ಕಳೆದೆರಡು ವರ್ಷಗಳಿಂದ ಕೋವಿಡ್ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಕಣ್ಣಿಗೆ ಕಾಣದ ವೈರಸ್ ಜಗತ್ತಿನಲ್ಲಿ ಅದೆಷ್ಟೋ ಮಂದಿಯನ್ನು ಬಲಿ ಪಡೆದುಕೊಂಡಿದೆ. ಕೊರೊನಾ ಬಂದ ನಂತರ ಜನ ರೋಗನಿರೋಧಕ ಶಕ್ತಿ ಹೆಚ್ಚಿಸುವತ್ತ ಹೆಚ್ಚಿನ ಆಗಮನ ಹರಿಸುತ್ತಿದ್ದಾರೆ. ಇದಕ್ಕಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿರುವ ಆಹಾರವನ್ನು ತೆಗೆದುಕೊಳ್ಳುತ್ತಾರೆ. ಇದು ಶ್ವಾಸಕೋಶಗಳ ಆರೋಗ್ಯ ಉತ್ತಮ ಪಡಿಸುತ್ತಿದೆ. ಶ್ವಾಸಕೋಶ ಪೋಷಿಸುವ ಒಂದಿಷ್ಟು ಆಹಾರಗಳನ್ನು ಇಲ್ಲಿ ನೀಡಲಾಗಿದೆ.
ಅರಿಶಿನ: ಆಹಾರದಲ್ಲಿ ಅರಿಶಿನ ಸೇವನೆಯಿಂದ ಶ್ವಾಸನಾಳದಲ್ಲಿನ ಕಫವನ್ನು ಕಡಿಮೆ ಮಾಡುತ್ತದೆ. ಉಸಿರಾಟದ ಸಮಸ್ಯೆಗಳನ್ನೂ ಇದು ಪರಿಹರಿಸುತ್ತದೆ.
ಶುಂಠಿ: ನಮ್ಮ ಆಹಾರ ಪದ್ಧತಿಯಲ್ಲಿ ಶುಂಠಿ ಕೂಡ ಮುಖ್ಯವಾಗಿದ್ದು ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಶ್ವಾಸಕೋಶದಲ್ಲಿನ ಕಲ್ಮಶಗಳನ್ನು ಕಡಿಮೆ ಮಾಡುತ್ತದೆ. ಇದು ಸುಲಭವಾಗಿ ಉಸಿರಾಡಲು ಸಹಕಾರಿಯಾಗಿದೆ.
ಸೇಬು:ಸೇಬುಗಳಲ್ಲಿ ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಬಿ ಮತ್ತು ಬೀಟಾ ಕ್ಯಾರೋಟಿನ್ ಸಮೃದ್ಧವಾಗಿರುತ್ತದೆ. ಶ್ವಾಸಕೋಶಗಳು ಶಕ್ತಿಯುತವಾಗಿರಲು ಮತ್ತು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.