ನವದೆಹಲಿ: ಎದೆ ಉರಿ, ಉರಿಯೂತ, ಆಮ್ಲತೆ, ಹಸಿವು ಹಾಗು ಬಾಯಾರಿಕೆ ಹೆಚ್ಚಳ ನಿಮಗೆ ಆಗುತ್ತಿದ್ದರೆ ಇದು ಪಿತ್ತ ದೋಷದ ಸಮಸ್ಯೆಯೆಂದೇ ತಿಳಿಯಿರಿ. ಈ ಎಲ್ಲಾ ಗುಣಲಕ್ಷಣಗಳು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಸಿವಿನ ಲಕ್ಷಣವೂ ನಿಮ್ಮಲ್ಲಿ ಕೋಪದೊಂದಿಗೆ ಒತ್ತಡ ಹೆಚ್ಚಿಸುತ್ತದೆ. ಈ ಲಕ್ಷಣಗಳು ದೇಹದಲ್ಲಿನ ಪಿತ್ತ ದೋಷದ ಅಸಮತೋಲನದ ಲಕ್ಷಣಗಳಾಗಿವೆ.
ಆಯುರ್ವೇದದ ಪ್ರಕಾರ, ಪ್ರತಿಯೊಬ್ಬರ ದೇಹವನ್ನು ಮೂರು ಶಕ್ತಿ ಚಟುವಟಿಕೆ ನಿಯಂತ್ರಿಸುತ್ತದೆ. ಅವುಗಳೆಂದರೆ ವಾತ ದೋಷ, ಪಿತ್ತ ದೋಷ ಮತ್ತು ಕಫ ದೋಷ. ಪಿತ್ತ ದೋಷ ಸಾಮಾನ್ಯವಾಗಿ ಚಯಾಪಚಯನ ಕಾರ್ಯಾಚರಣೆ ಆಗಿದೆ. ಈ ದೋಷದ ಅಸಮತೋಲನ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಪಿತ್ತ ದೋಷವನ್ನು ನಿಮ್ಮ ಜೀವನಶೈಲಿಯಲ್ಲಿನ ಮೂರು ಬದಲಾವಣೆ ನಡೆಸುವ ಮೂಲಕ ಸುಧಾರಣೆ ಮಾಡಬಹುದು.
1. ಪಿತ್ತ ದೋಷದ ಆಹಾರ ಪದ್ದತಿ ಪಾಲಿಸಿ: ದೇಹಕ್ಕೆ ನೈಸರ್ಗಿಕವಾಗಿ ತಂಪು ಮಾಡುವಂತಹ ಆಹಾರಗಳನ್ನು ಸೇವಿಸುವ ಮೂಲಕ ನಿಯಂತ್ರಣ ಮಾಡಬಹುದು. ನೈಸರ್ಗಿಕ ಸಿಹಿ ರುಚಿಯ ಆಹಾರಗಳನ್ನು ಆರಿಸಿಕೊಳ್ಳಿ. ಹೂಕೋಸು, ಸೌತೆಕಾಯಿ, ಹಸಿರು ಸೊಪ್ಪು, ಕುಂಬಳಕಾಯಿ, ಬಟಾಣಿ, ತುಪ್ಪ, ತೆಂಗಿನಕಾಯಿ ಮತ್ತು ಸೇಬನ್ನು ಆಹಾರದಲ್ಲಿ ಸೇರಿಸಿ. ಬಾದಾಮಿಯನ್ನು ಪಿತ್ತಾಹಾರ ಎಂದು ಪರಿಗಣಿಸಲಾಗಿದ್ದು, ಪಿತ್ತ ದೋಷದ ಸಮಾತೋಲನ ಕಾಪಾಡಬಹುದು. ಆದಾಗ್ಯೂ, ನೆನೆಸಿ, ಸಿಪ್ಪೆ ತೆಗೆದ ಬಾದಾಮಿಯನ್ನು ಸೇವಿಸುವುದು ಉತ್ತಮ. ಬಾದಾಮಿಯೂ ವಾತ ಮತ್ತು ಪಿತ್ತದ ಅಸಮತೋಲನ ನಿವಾರಿಸುವ ಜೊತೆಗೆ ದೇಹದ ಆಂತರಿಕ ಶಾಖವನ್ನು ಕಡಿಮೆ ಮಾಡುತ್ತದೆ. ಖಾರವಾದ, ಬಿಸಿ ಮತ್ತು ಉಳಿ ಆಹಾರವನ್ನು ಸೇವಿಸದೇ ಇರುವುದು ಉತ್ತಮ.