ಲಂಡನ್( ಯುಕೆ): 21ನೇ ಶತಮಾನದಲ್ಲಿ ನಿದ್ದೆ ಸ್ವರೂಪ ಸಾಕಷ್ಟು ಬದಲಾಗಿದೆ. ನಿದ್ರೆಯನ್ನು ಸ್ವಯಂ ನಿಯಂತ್ರಣಗೊಳಿಸಲು ಈ ತಂತ್ರಜ್ಞಾನ ಮುಂದಾಗಿದೆ. ನಿದ್ರೆಯ ಗಾಢತೆ ಪತ್ತೆಯಿಂದ ನಿದ್ದೆಯಿಂದ ಎಚ್ಚರಗೊಳ್ಳುವ ಔಷಧಿವರೆಗೆ ಪ್ರತಿಯೊಂದು ಅವಿಷ್ಕಾರಗಳು ತಂತ್ರಜ್ಞಾನದ ಅವೇಗವೂ ನಮ್ಮ ನಿದ್ರೆಯನ್ನು ಅಮೂಗ್ರವಾಗಿ ಬದಲಾಯಿಸುವ ಸಾಮರ್ಥ್ಯ ಹೊಂದಿದೆ. ನಮ್ಮ ಮೂಲ ನಿದ್ರೆಯ ಕನಸನ್ನು ಕೂಡ ಹೊಸ ತಂತ್ರಜ್ಞಾನಗಳು ಬೆನ್ನಟ್ಟುತ್ತದೆ. ಇವು ನಮ್ಮ ನಿದ್ರೆಯನ್ನು ಸಾಮಾಜಿಕ ಜೀವನಕ್ಕೆ ಹೊಂದಿಕೆಯಾಗುವಂತೆ ಮಾಡುವಲ್ಲಿ ಸಹಾಯ ಮಾಡುತ್ತದೆ. ದೀರ್ಘ ನಿದ್ದೆ ಅಥವಾ ರಾತ್ರಿಯ ನಿದ್ದೆ ತಪ್ಪಿಸಲು ಕೂಡ ಸಹಾಯ ಮಾಡುತ್ತದೆ. ತಂತ್ರಜ್ಞಾನವೂ ಹೇಗೆ ನಮ್ಮ ನಿದ್ದೆಗೆ ಸಹಾಯ ಮಾಡುತ್ತದೆ ಎಂಬುದರ ಕುರಿತ ವಿವರಣೆ ಇಲ್ಲಿದೆ.
ದೀರ್ಘ ಎಚ್ಚರಗೊಳ್ಳುವಿಕೆ: ನಿದ್ರೆ ಮಾತ್ರೆಗಳು ಇತ್ತೀಚೆಗೆ ಎಚ್ಚರವಾಗುವ ಔಷಧಗಳೊಂದಿಗೆ ಸೇರಿದೆ. ಇವು ಸುರಕ್ಷಿತವಾಗಿದ್ದು, ಹೆಚ್ಚು ಶಕ್ತಿಯುತವಾಗಿದ್ದು, ಕೆಫಿನ್ಗೆ ಪರ್ಯಾಯವಾಗಿದೆ. ಈಗಾಗಲೇ ನಿದ್ರೆಯಿಂದ ವಂಚಿತರಾದವರಿಗೆ ಇವು ಉತ್ತಮವಾಗಿ ಕೆಲಸ ಮಾಡುತ್ತದೆ. ಈಗಾಗಲೇ ಉತ್ತಮ ವಿಶ್ರಾಂತಿ ಪಡೆದವರಿಗೆ ಇದು ಹೆಚ್ಚಿನ ಮಟ್ಟದಲ್ಲಿ ಪರಿಣಾಮ ಬೀರುವುದಿಲ್ಲ.
ಮೊಡಫಿನಿಲ್ ಅದರ ಅರಿವಿನ ವರ್ಧಿಸುವ ಪರಿಣಾಮಗಳಿಗೆ ಹೆಸರಾಗಿದೆ. ಇದರಿಂದ ನಿರ್ಧಿಷ್ಟ ಸಮಯದಿಂದ ಹಲವು ದಿನಗಳವರೆಗೆ ವ್ಯಕ್ತಿ ಎಚ್ಚರದಿಂದ ಇರಬಹುದು. ಕೆಲವು ವಿಜ್ಞಾನಿಗಳು ಕೆಲವು ಪ್ರಕರಣದಲ್ಲಿ ಇದನ್ನು ತೋರಿಸಿದ್ದಾರೆ. ಆದಾಗ್ಯೂ, ಇದರ ಫಲಿತಾಂಶ ಕೆಫಿನ್ಗೆ ಸಾಮಾನ್ಯವಾದ ಪರಿಣಾಮಕ್ಕೆ ತೋರಿಸಿದಾಗ ಮಿಶ್ರವಾಗಿದೆ
ನರ್ಕೊಲೆಪ್ಸಿಯಂತಹ ಜನರಿಗೆ ಸಹಾಯ ಮಾಡುವ ದೃಷ್ಟಿಯಿಂದ ಈ ಔಷಧವನ್ನು ಅಭಿವೃದ್ಧಿ ಪಡಿಸಲಾಗಿದೆ. ಆದರೆ, ಕೆಲವರು ಗಮನವನ್ನು ಹೆಚ್ಚಿಸುವ ಪರಿಣಾಮವನ್ನು ಹೊಂದಿರುವವರು ಬಳಕೆ ಮಾಡುತ್ತಿದ್ದಾರೆ. ಈ ಔಷಧವನ್ನು ವೈದ್ಯರ ಶಿಫಾರಸ್ಸಿಲ್ಲದೇ ಹಲವು ದೇಶದಲ್ಲಿ ನೀಡುವುದಿಲ್ಲ. ಅರಿವಿನ ವರ್ಧಿಸಲು ಅಥವಾ ಎಚ್ಚರಗೊಳ್ಳಲು ಇದನ್ನು ಬ್ಲಾಕ್ ಮಾರುಕಟ್ಟೆ ಅಥವಾ ಈಗಾಗಲೇ ವೈದ್ಯರಿಂದ ಪ್ರಿಸ್ಕ್ರಿಪ್ಷನ್ ಪಡೆದವರಿಂದ ಪಡೆಯಲಾಗುತ್ತಿದೆ.
ಮೊಡಫಿನಿಲ್ 2020ರಲ್ಲಿ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಜನಪ್ರಿಯಾಗಿತ್ತು. ಲಾಫ್ಬ್ರೊಗ್ ಯುನಿವರ್ಸಿಟಿ ಸಂಶೋಧಕರು ನಡೆಸಿದ ಸಮೀಕ್ಷೆಯಲ್ಲಿ 506 ವಿದ್ಯಾರ್ಥಿಗಳಲ್ಲಿ ಬ್ರಿಟನ್ನ 54 ಯುನಿವರ್ಸಿಗಳು ಶೇ 19ರಷ್ಟು ಅರಿವಿನ ವರ್ಧಿತ ವಸ್ತುಗಳನ್ನು ಸೇವಿಸುತ್ತಿದ್ದರು. ಆದರೆ, ವೈದ್ಯಕೀಯ ಕಾರಣವಿಲ್ಲದೇ, ಪಡೆಯುವವರಲ್ಲಿ ಇದು ಆರೋಗ್ಯದ ಅಪಾಯವನ್ನು ಹೊಂದಿತು. ಈ ಔಷಧಗಳ ಸುರಕ್ಷತೆ ಬಗ್ಗೆ ಯಾವುದೇ ಅಧ್ಯಯನಗಳು ತಿಳಿಸಿಲ್ಲ. ದೀರ್ಘಕಾಲ ಎಚ್ಚರವಿರಲು ಬಳಕೆ ಮಾಡುವ ಈ ಔಷಧಗಳಿಗೆ ಏನು ಬಳಕೆ ಮಾಡುತ್ತಾರೆ ಎಂಬುದು ತಿಳಿದಿಲ್ಲ. ಆದರೆ, ಇದು ನಿದ್ದೆ ಚಕ್ರಕ್ಕೆ ಅಡ್ಡಿಯಾಗುವುದರ ಜೊತೆಗೆ ಆರೋಗ್ಯ ಸಮಸ್ಯೆಗಳಾದ ಮಧುಮೇಹ, ಹೃದಯರೋಗಕ್ಕೆ ಕಾರಣವಾಗುತ್ತದೆ ಎಂದು ತಿಳಿದು ಬಂದಿದೆ.
ಸ್ಮಾರ್ಟ್ ಸ್ಲೀಪ್: ಈಗಾಗಲೇ ಅನೇಕ ಮಂದಿ ಸ್ಮಾರ್ಟ್ ವಾಚ್, ಸ್ಮಾರ್ಟ್ ಆಭರಣ ಮತ್ತು ಫಿಟ್ನೆಸ್ ಬ್ಯಾಂಡ್ ಮೂಲಕ ತಮ್ಮ ನಿದ್ರೆಯನ್ನು ಟ್ರಾಕ್ ಮಾಡುತ್ತಿದ್ದಾರೆ. ನಿದ್ರೆಯ ಚಕ್ರದ ಸೂಕ್ತ ಬಿಂದುವಿನಲ್ಲಿ ಆಲಾರಂಗಳು ಎಚ್ಚರಗೊಳಿಸುತ್ತದೆ. ಮೊಷನ್ ಸೆನ್ಸಾರ್ ಆ್ಯಪ್ಗಳು ನಿದ್ರೆಯ ಪ್ಯಾರ್ಟನ್ ಅನ್ನು ವಿಶ್ಲೇಷಣೆ ಮಾಡುತ್ತದೆ. ಹೊಸ ನಿದ್ರೆಯ ಟ್ರಾಕಿಂಗ್ ವಿಧಾನದಲ್ಲಿ ಪೈಜಾಮದಲ್ಲಿ ಸೆನ್ಸಾರ್ ಅಳವಡಿಸುವ ಮೂಲಕ ಅಥವಾ ರೋಬಾಟಿಕ್ ದಿಂಬಿನ ಭಂಗಿ, ಉಸಿರಾಟ ಮತ್ತು ಹೃದಯಬಡಿತ ಟ್ರಾಕ್ ಮಾಡಬಹುದು. ಈ ನಡುವೆ ಜಪಾನ್ನಲ್ಲಿ ಈಗಾಗಲೇ ಕೇರ್ ರೋಬೊಟ್ಗಳನ್ನು ತಯಾರಿ ನಡೆಸಲಾಗುತ್ತಿದ್ದು, ಇದು ವಯಸ್ಕರ ನಿದ್ರೆಗೆ ಸಹಾಯ ಮಾಡುತ್ತದೆ.
ಕನಸಿನಲ್ಲೂ ಬದಲಾವಣೆ: ಕನಸಿನ ನಿರ್ವಹಣೆ ತಂತ್ರಜ್ಞಾನವೂ ಇದೀಗ ಈ ಹಿಂದಿಗಿಂತ ಹೆಚ್ಚು ಅಭಿವೃದ್ಧಿ ಆಗಿದೆ. ವಿಜ್ಞಾನಿಗಳು ಸೆನ್ಸಾರ್ ಉತ್ತೇಜನ ತಂತ್ರಜ್ಞಾನ ಮತ್ತು ಸಾಧನಗಳು ವರ್ಚುಯಲ್ ದೃಷ್ಟಿಕೋನ ನೀಡುತ್ತದೆ, ಇದು ಸ್ಲೀಪ್ ಇಂಜಿನಿಯರ್ ರೀತಿ ಕೆಲಸ ಮಾಡುತ್ತದೆ. ಈ ಹೊಸ ವಿಜ್ಞಾನವು ನಿದ್ರೆಯ ಚಕ್ರದಲ್ಲಿ ನಿರ್ದಿಷ್ಟ ಸಮಯಗಳಲ್ಲಿ, ಶಬ್ದಗಳು ಮತ್ತು ಕಂಪನಗಳನ್ನು ಕ್ಲಿಕ್ ಮಾಡುವಂತಹ ಸಂವೇದನಾ ಪ್ರಚೋದಕಗಳಿಗೆ ನಿದ್ರಿಸುತ್ತಿರುವವರನ್ನು ಬಹಿರಂಗಪಡಿಸುವುದನ್ನು ಒಳಗೊಂಡಿರುತ್ತದೆ. ಇದು ನಿದ್ರೆಯ ಗುನಮಟ್ಟವನ್ನು ಸುಧಾರಣೆ ಮಾಡುವುದು, ಸ್ಮರಣೆ ಹೆಚ್ಚಿಸುವುದು ಸೇರಿದಂತೆ ಪಿಟಿಎಸ್ಡಿಗೆ ಚಿಕಿತ್ಸೆ ನೀಡುತ್ತದೆ.
ಇದನ್ನೂ ಓದಿ: ವಯಸ್ಕರಲ್ಲಿ ಮಿದುಳಿನ ಬೆಳವಣಿಗೆಗೆ ವಾಕಿಂಗ್ ಸಹಕಾರಿ