ಹೈದರಾಬಾದ್: ಪ್ರಕೃತಿಯು ಅತಿದೊಡ್ಡ ಗುಣಪಡಿಸುವ ಶಕ್ತಿಯನ್ನು ಹೊಂದಿದ್ದು, 'ಸುಖೀಭವ ವೆಲ್ನೆಸ್'ನಲ್ಲಿ ಈ ಪ್ರಕೃತಿಯ ಶಕ್ತಿಯನ್ನು ಗುಣಪಡಿಸಲು (Heal), ಪುನರ್ಯೌವನಗೊಳಿಸಲು (Rejuvenate) ಮತ್ತು ನಿಮ್ಮನ್ನು ಪರಿವರ್ತಿಸಲು (Transform) ಬಳಲಾಗುತ್ತದೆ.
ನಿಮ್ಮ ಆಂತರಿಕ ಶಕ್ತಿಯನ್ನು ಮರು ಸಮತೋಲನಗೊಳಿಸಲು ಮತ್ತು ದೇಹ, ಮನಸ್ಸು ಹಾಗೂ ಆತ್ಮದ ಸಂಪೂರ್ಣ ಸ್ವಾಸ್ಥ್ಯವನ್ನು ಪುನಃಸ್ಥಾಪಿಸಲು ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿರುವ 'ಸುಖೀಭವ ವೆಲ್ನೆಸ್' ಔಷಧವಿಲ್ಲದೇ, ಸಾಂಪ್ರದಾಯಿಕ ಚಿಕಿತ್ಸೆಯನ್ನು ನೀಡಲು ಸಿದ್ಧವಾಗಿದೆ.
"ಈ ಚಿಕಿತ್ಸೆಗಳ ಅನನ್ಯತೆಯೆಂದರೆ ನೈಸರ್ಗಿಕವಾಗಿ ಗುಣಪಡಿಸಬಹುದಾದ ವಿವಿಧ ರೀತಿಯ ಅಸ್ವಸ್ಥತೆಗಳನ್ನು ಗಮನದಲ್ಲಿಟ್ಟುಕೊಂಡು ಇವುಗಳನ್ನು ವಿನ್ಯಾಸಗೊಳಿಸಲಾಗಿದೆ" ಎಂದು ಸುಖೀಭವ ಸ್ವಾಸ್ಥ್ಯ ನಿರ್ದೇಶಲಿ ಡಾ.ಅರ್ಚನಾ ಮಾಮ್‌ಗೈನ್ ಹೇಳಿದ್ದಾರೆ.
ಜೀವನಶೈಲಿ ವಿನ್ಯಾಸ ಕಾರ್ಯಕ್ರಮ:
'ಸುಖೀಭವ ವೆಲ್ನೆಸ್' ಚಿಕಿತ್ಸೆಯನ್ನು ನೀಡುವುದಲ್ಲದೆ ದೇಹವನ್ನು ನಿರ್ವಿಷಗೊಳಿಸಲು ಪ್ರಯತ್ನಿಸುತ್ತದೆ. ಇದರಿಂದಾಗಿ ವ್ಯಕ್ತಿಗೆ ಹೊಸ ಶಕ್ತಿ ಮತ್ತು ವೇಗವನ್ನು ನೀಡುತ್ತದೆ. ಜೊತೆಗೆ ಚಿಕಿತ್ಸೆಯಿಂದ ಅವನಿಗೆ / ಅವಳಿಗೆ ಸಂಪೂರ್ಣ ಲಾಭವಾಗುತ್ತದೆ. ಇದಕ್ಕಾಗಿ ಮೊದಲು ವ್ಯಕ್ತಿಯ ದೇಹವನ್ನು ಪರೀಕ್ಷಿಸುವ ಮೂಲಕ ಮತ್ತು ಅವನ / ಅವಳ ಸಮಸ್ಯೆಗಳನ್ನು ವಿವರವಾಗಿ ಅರ್ಥಮಾಡಿಕೊಳ್ಳುವ ಮೂಲಕ ಸರಿಯಾದ ಕಾರ್ಯಕ್ರಮವನ್ನು ಯೋಜಿಸಲಾಗಿದೆ.
ಯೋಜನೆಯಲ್ಲಿ ಅಗತ್ಯಕ್ಕೆ ಅನುಗುಣವಾಗಿ ಚಿಕಿತ್ಸೆಗಳ ಸಂಖ್ಯೆ, ಆಹಾರ ವಿನ್ಯಾಸ ಮತ್ತು ವಿಶೇಷ ಯೋಗ ವ್ಯಾಯಾಮಗಳನ್ನು ಸೂಚಿಸಲಾಗುತ್ತದೆ. ಜೀರ್ಣಕಾರಿ ಸಮಸ್ಯೆಗಳು, ಒತ್ತಡ, ನಿದ್ರಾಹೀನತೆ, ಸೌಂದರ್ಯದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಮತ್ತು ಮನಸ್ಸು, ದೇಹ ಮತ್ತು ಮೆದುಳಿನ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಲು ನೈಸರ್ಗಿಕ ಮತ್ತು ಪ್ರಾಚೀನ ಸಾಂಪ್ರದಾಯಿಕ ವಿಧಾನಗಳನ್ನು ಗಮನದಲ್ಲಿಟ್ಟುಕೊಂಡು ಇಲ್ಲಿ ಒದಗಿಸಲಾದ ಚಿಕಿತ್ಸೆಯನ್ನು ವಿನ್ಯಾಸಗೊಳಿಸಲಾಗಿದೆ.
ಚಿಕಿತ್ಸೆಯಲ್ಲಿ ಅಗತ್ಯವಿರುವ ಅವಧಿಯನ್ನು ಸ್ವರೂಪ ಮತ್ತು ಸಮಸ್ಯೆಗಳಿಗೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ. ವ್ಯಕ್ತಿಯ ಆಹಾರವು ಅವನ ಮನಸ್ಸಿನ ಮೇಲೆ ಪ್ರತಿಫಲಿಸುತ್ತದೆ. ಆದ್ದರಿಂದ ಚಿಕಿತ್ಸೆಯ ಸಮಯದಲ್ಲಿ ನಿರ್ದಿಷ್ಟ ಆಹಾರವನ್ನು ಸಹ ಸೂಚಿಸಲಾಗುತ್ತದೆ. ಚಿಕಿತ್ಸೆಯ ಸಮಯದಲ್ಲಿ ವಿಶೇಷ ಆಹಾರವನ್ನು ಅನುಸರಿಸುವುದು ಕಡ್ಡಾಯವಾಗಿದೆ ಎಂದು ಡಾ. ಅರ್ಚನಾ ಮಾಮ್‌ಗೈನ್ ವಿವರಿಸಿದ್ದಾರೆ.
ಸಂಪೂರ್ಣ ನಿರ್ವಹಣಾ ಕಾರ್ಯಕ್ರಮ:
'ಸುಖೀಭವ ವೆಲ್ನೆಸ್'ನಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಸಂಪೂರ್ಣ ನಿರ್ವಹಣಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಇಲ್ಲಿ ನಡೆಯುತ್ತಿರುವ ವಿವಿಧ ಕಾರ್ಯಕ್ರಮಗಳಲ್ಲಿ, ವಿವಿಧ ಚಿಕಿತ್ಸೆಗಳ ಸಹಾಯದಿಂದ ವಿವಿಧ ದೈಹಿಕ ಮತ್ತು ಮಾನಸಿಕ ಅಸ್ವಸ್ಥತೆಗಳನ್ನು ನಿವಾರಿಸಬಹುದು ಎಂದು ತಜ್ಞರು ವಿವರಿಸುತ್ತಾರೆ.
"ಮನಹ್ತ್ರಿಪ್ತಿ": ಒತ್ತಡ ನಿರ್ವಹಣಾ ಕಾರ್ಯಕ್ರಮ
ದೇಹವನ್ನು ಒತ್ತಡದಿಂದ ಮುಕ್ತಗೊಳಿಸಲು ಮತ್ತು ದೇಹ, ಮನಸ್ಸು ಹಾಗೂ ಆತ್ಮದ ನೈಸರ್ಗಿಕ ಲಯವನ್ನು ಮರಳಿ ತರಲು ನೈಸರ್ಗಿಕ ಚಿಕಿತ್ಸೆಗಳು ಮತ್ತು ಯೋಗ ಕ್ರಿಯೆಗಳ ಸಂಯೋಜನೆಯನ್ನು ರೂಪಿಸುವ ಸಮಗ್ರ ವಿಧಾನವನ್ನು ಇದು ಅಳವಡಿಸಿಕೊಂಡಿದೆ. ಇದು ಆರೋಗ್ಯಕರ ಜೀವನಶೈಲಿಯನ್ನು ಸಾಧಿಸುವುದು, ಒತ್ತಡವನ್ನು ಕಡಿಮೆ ಮಾಡುವುದು ಮತ್ತು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಸೃಷ್ಟಿತ್ತದೆ.
"ಸುನಿದ್ರಾ": ನಿದ್ರೆಯ ಪುಷ್ಟೀಕರಣ ಕಾರ್ಯಕ್ರಮ
ಇದು ಸಾಂಪ್ರದಾಯಿಕ ಆಯುರ್ವೇದ ಚಿಕಿತ್ಸೆಗಳು ಮತ್ತು ಪ್ರಕೃತಿ ಚಿಕಿತ್ಸೆಯ ಮಿಶ್ರಣಗಳಿಂದ ಸ್ಫೂರ್ತಿ ಪಡೆಯುತ್ತದೆ. ಕಾರ್ಯಕ್ರಮವು ಪ್ರಕೃತಿ ಚಿಕಿತ್ಸೆಯ ಜೀವನಶೈಲಿ ಸಮಾಲೋಚನೆ, ಗಿಡಮೂಲಿಕೆ ಮತ್ತು ಪೋಷಕಾಂಶಗಳ ಪರಿಹಾರಗಳನ್ನು ಒಳಗೊಂಡಿದೆ. ಇದು ಒತ್ತಡ, ದೇಹದ ಅಸಮತೋಲನ ಇತ್ಯಾದಿಗಳಿಂದ ಉಂಟಾಗುವ ನಿದ್ರೆಯ ಗುಣಮಟ್ಟವನ್ನು ತಿಳಿಸುತ್ತದೆ.