ಬೆಂಗಳೂರು: ಉಪವಾಸವನ್ನು ಮಾಡುವುದರಿಂದ ದೇಹ ಸೋಂಕಿನ ವಿರುದ್ಧ ಹೋರಾಡಲು ಕಷ್ಟವಾಗುತ್ತದೆ. ಜೊತೆಗೆ ಹೃದಯ ಸಂಬಂಧಿ ರೋಗವನ್ನು ಅಭಿವೃದ್ಧಿ ಪಡಿಸುವ ಸಾಧ್ಯತೆ ಇದೆ ಎಂದು ಅಧ್ಯಯನ ತಿಳಿಸಿದೆ. ಇಕಾನ್ ಸ್ಕೂಲ್ ಆಫ್ ಮೆಡಿಸಿನ್‌ನ ಈ ಸಂಬಂಧ ಇಲಿಗಳ ಮಾದರಿ ಪರೀಕ್ಷೆ ನಡೆಸಿದೆ. ಊಟವನ್ನು ಬಿಡುವುದರಿಂದ ಮಿದುಳಿನ ಪ್ರತಿರಕ್ಷಣಾ ಕೋಶಗಳಿಗೆ ಹಾನಿಯಾಗುವುದರ ಜೊತೆಗೆ ದೇಹದ ಮೇಲೆ ಹೇಗೆ ಪ್ರಭಾವ ಬೀರಬಹುದು ಎಂಬುದನ್ನು ಈ ಅಧ್ಯಯನದ ಮೂಲಕ ಅರ್ಥೈಸಿಕೊಳ್ಳಬಹುದಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಉಪವಾಸ ಮಾಡುವುದು ಆರೋಗ್ಯಕರ. ಇದರಿಂದ ಸಾಕಷ್ಟ ಪ್ರಯೋಜನೆ ಇದೆ ಎಂಬುದರ ಸಂಬಂಧ ಸಾಕಷ್ಟು ಸಾಕ್ಷಿಗಳಿವೆ. ಆದರೆ, ಈ ಉಪವಾಸವೂ ನಮ್ಮ ಆರೋಗ್ಯದ ಮೇಲೆ ದುಬಾರಿ ಪರಿಣಾಮ ಬೀರಲಿದ್ದು, ಸೋಂಕಿನ ವಿರುದ್ಧ ಹೋರಾಡುವ ಸಾಮರ್ಥ್ಯದ ಕಡಿಮೆ ಮಾಡುತ್ತದೆ ಎಂದು ಲೇಖಕ ಫಿಲಿಪ್ ಸ್ವಿರ್ಸ್ಕಿ ತಿಳಿಸಿದ್ದಾರೆ.
ಇಲಿಗಳ ಮೇಲೆ ಅಧ್ಯಯನ: ಉಪವಾಸವೂ ನರ ಮತ್ತು ಪ್ರತಿರಕ್ಷಣಾ ವ್ಯವಸ್ಥೆಗಳ ನಡುವೆ ಹೇಗೆ ಪರಿಣಾಮ ಬೀರಲಿದೆ ಎಂಬುದರ ಸಂಬಂಧ ಇಲಿಗಳ ಮೇಲೆ ಅಧ್ಯಯನ ನಡೆಸಲಾಗಿದೆ. ಈ ಕುರಿತು ಅರ್ಥೈಸಿಕೊಳ್ಳಲು ಅಲ್ಪಾವಧಿ ಮತ್ತು 24 ಗಂಟೆಗಳಿಗಿಂತಲೂ ಹೆಚ್ಚಿನ ದೀರ್ಘಾವಧಿಯ ಉಪವಾಸಗಳನ್ನು ನಡೆಸಲಾಗಿದೆ. ಈ ವೇಳೆ ಪ್ರತಿ ರಕ್ಷಣಾ ವ್ಯವಸ್ಥೆ ಮೇಲೆ ಹೇಗೆ ಹಾನಿ ಮಾಡುತ್ತವೆ ಎಂಬುದನ್ನು ತಿಳಿಯಲಾಗಿದೆ. ಇಲಿಗಳ ಒಂದು ಗುಂಪಿಗೆ ಬೆಳಗ್ಗೆ ಎದ್ದಾಕ್ಷಣ ಉಪಹಾರ ನೀಲಾಗಿದ್ದು, ಮತ್ತೊಂದು ಗುಂಪಿಗೆ ಉಪವಾಸಕ್ಕೆ ದೂಡಲಾಗಿದೆ. ಈ ಎರಡು ಗುಂಪಿನ ಇಲಿಗಳ ರಕ್ತದ ಮಾದರಿಗಳನ್ನು ಪರಿಶೀಲಿಸಲಾಗಿದೆ. ಈ ವೇಳೆ ಇದರಲ್ಲಿ ಭಾರೀ ವ್ಯತ್ಯಾಯ ಕಂಡು ಬಂದಿದೆ.