ಕರ್ನಾಟಕ

karnataka

ETV Bharat / sukhibhava

ಚಳಿಗಾಲದಲ್ಲಿ ಕಾಡುವ ವಿವಿಧ ಚರ್ಮದ ಕಾಯಿಲೆಗಳು.. ಇಲ್ಲಿದೆ ಸಿಂಪಲ್ ಸಲ್ಯೂಷನ್ - ತ್ವಚೆಯ ಸಮಸ್ಯೆ

ಪಿಟ್ಸ್‌ಬರ್ಗ್ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಸೋನಾಲ್ ಚೌಧರಿ ಮತ್ತು ಜೆಫ್ರಿ ಚೆನ್ ಅವರು ಚಳಿಗಾಲದಲ್ಲಿ ಕಾಡಬಹುದಾದ ವಿವಿಧ ಚರ್ಮದ ಕಾಯಿಲೆಗಳ ಕಾರಣಗಳನ್ನು ವಿವರಿಸಿದ್ದಾರೆ.

Representative image
ಸಾಂದರ್ಭಿಕ ಚಿತ್ರ

By

Published : Jan 23, 2023, 4:37 PM IST

ಪಿಟ್ಸ್‌ಬರ್ಗ್ (ಅಮೆರಿಕ):ಚಳಿಗಾಲ ಬಂತೆಂದರೆ ಸಾಕು, ತ್ವಚೆಯ ಸಮಸ್ಯೆಗಳು ಸಾಲು ಸಾಲಾಗಿ ಶುರುವಾಗಿ ಬಿಡುತ್ತದೆ. ಈ ಸಮಯದಲ್ಲಿ ಎಷ್ಟೇ ಕಾಳಜಿವಹಿಸಿದರೂ ಸಾಲದು.ಪಿಟ್ಸ್‌ಬರ್ಗ್​ನ ಅನೇಕ ಭಾಗಗಳಲ್ಲಿ ಚಳಿಗಾಲದ ಸಂದರ್ಭದಲ್ಲಿ ಶುಷ್ಕ ಸ್ಥಿತಿ ಚರ್ಮದ ಮೇಲೆ ಹಾನಿಯನ್ನುಂಟು ಮಾಡುತ್ತದೆ. ದೇಹದ ಅತಿದೊಡ್ಡ ಅಂಗವಾಗಿರುವ ಚರ್ಮದ ಪ್ರಾಥಮಿಕ ಪಾತ್ರವು ಬಾಹ್ಯ ಪರಿಸರಕ್ಕೆ ಭೌತಿಕ ತಡೆಗೋಡೆಯಾಗಿ ಕಾರ್ಯ ನಿರ್ವಹಿಸುತ್ತದೆ. ನಿಮ್ಮ ಚರ್ಮವು ಆರೋಗ್ಯವಾಗಿದ್ದಾಗ, ಅಲರ್ಜಿಗಳು ಮತ್ತು ಸೋಂಕುಗಳಿಂದ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಆದರೆ, ಚಳಿಗಾಲದಲ್ಲಿ, ಹೊರಗಿನ ತಾಪಮಾನ ಮತ್ತು ತೇವಾಂಶ ಕಡಿಮೆಯಾದಾಗ ವಿವಿಧ ಚರ್ಮದ ಕಾಯಿಲೆಗಳು ಅಂಟಿಕೊಳ್ಳುತ್ತವೆ.

ವಿವಿಧ ಚರ್ಮದ ಕಾಯಿಲೆಗಳು: ಚಳಿಗಾಲದ ತಿಂಗಳುಗಳಲ್ಲಿ ಕೆಲವು ಸಾಮಾನ್ಯ ಚರ್ಮರೋಗಗಳು ಉಂಟಾಗುತ್ತವೆ. ಇವುಗಳಲ್ಲಿ ಎಸ್ಜಿಮಾ, ಚಿಲ್ಬ್ಲೇನ್ಸ್, ರೇನಾಡ್ಸ್, ಉರ್ಟೇರಿಯಾ ಮತ್ತು ಕೋಲ್ಡ್ ಫ್ಯೂನಿಕ್ಯುಲೈಟಿಸ್ ಸೇರಿವೆ. ಎಲ್ಲವೂ ತೀರ ಕಿರಿಕಿರಿಯುಂಟುಮಾಡುವ ಕಾಯಿಲೆಗಳಾಗಿವೆ. ಈ ಪರಿಸ್ಥಿತಿಗಳನ್ನು ಹೇಗೆ ನಿರ್ವಹಿಸಬೇಕು ಮತ್ತು ಚರ್ಮಶಾಸ್ತ್ರಜ್ಞರನ್ನು ಯಾವಾಗ ಭೇಟಿಯಾಗಬೇಕು ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ.

ಎಸ್ಜಿಮಾ: ಇದು ಉರಿಯೂತದ ಚರ್ಮದ ಸ್ಥಿತಿ. ಅದು ಶುಷ್ಕ ಮತ್ತು ತುರಿಕೆ ಉಂಟು ಮಾಡುತ್ತದೆ. ಸಾಬೂನುಗಳು, ಮಾರ್ಜಕಗಳು, ಹಾರ್ಮೋನ್ ಬದಲಾವಣೆಗಳು ಮತ್ತು ಚರ್ಮದ ಸೋಂಕುಗಳಿಂದ ಪ್ರಚೋದಿಸಬಹುದು. ಎಸ್ಜಿಮಾದಲ್ಲಿ ಹಲವಾರು ವಿಧಗಳಿವೆ. ಚಳಿಗಾಲದ ಕಜ್ಜಿ ಎಂದೂ ಕರೆಯಲ್ಪಡುವ ಆಸ್ಟಿಯಾಟೋಟಿಕ್ ಎಸ್ಜಿಮಾ, ವಯಸ್ಸಾದವರಲ್ಲಿ ಸಾಮಾನ್ಯವಾಗಿದೆ. ಚಳಿಗಾಲದ ತಿಂಗಳುಗಳಲ್ಲಿ, ಚರ್ಮವು ಒಣಗಬಹುದು ಮತ್ತು ಕೆಲವು ಸಂದರ್ಭಗಳಲ್ಲಿ ಬಿರುಕುಗಳಾಗಿ ಉರಿಯಬಹುದು. ತೀವ್ರ ಶುಷ್ಕತೆಯು ತುರಿಕೆ ಮತ್ತು ಸ್ಕ್ರಾಚಿಂಗ್ಗೆ ಕಾರಣವಾಗಬಹುದು. ಪ್ರತಿಯಾಗಿ, ಇದು ಗಾಯಗಳನ್ನು ಉಂಟು ಮಾಡುತ್ತದೆ.

ಪ್ರಾಥಮಿಕ ಚಿಕಿತ್ಸೆ: ಚರ್ಮವನ್ನು ಹೈಡ್ರೇಟ್ ಆಗಿ ಇಡುವುದು ಪ್ರಾಥಮಿಕ ಚಿಕಿತ್ಸೆಯಾಗಿದೆ. ನೀರು ಆಧಾರಿತ ಲೋಷನ್‌ಗಳು ಚರ್ಮವನ್ನು ಒಣಗಿಸುವುದನ್ನು ಇನ್ನಷ್ಟು ಹದಗೆಡಿಸಬಹುದು. ಆದ್ದರಿಂದ ಪೆಟ್ರೋಲಿಯಂ ಜೆಲ್ಲಿ, ಮಿನರಲ್ ಆಯಿಲ್ ಅಥವಾ ವ್ಯಾಸಲೀನ್‌ನಂತಹ ಹೆಚ್ಚಿನ ತೈಲ ಅಂಶ ಇರುವ ಮಾಯಿಶ್ಚರೈಸರ್‌ಗಳನ್ನು ಬಳಸಬೇಕು.

ಚಿಲ್ಬ್ಲೇನ್ಸ್: ಚಿಲ್ಬ್ಲೇನ್ಸ್, ಪೆರ್ನಿಯೊ ಎಂದೂ ಕರೆಯುತ್ತಾರೆ. ಇದು ಚರ್ಮವು ಶೀತ ವಾತಾವರಣಕ್ಕೆ ಒಡ್ಡಿಕೊಂಡಾಗ ಸಂಭವಿಸುವ ಸಣ್ಣ ತುರಿಕೆ. ಬೆರಳುಗಳು, ಕಾಲ್ಬೆರಳುಗಳು, ಕಿವಿ ಮತ್ತು ಮುಖದ ಮೇಲೆ ಪರಿಣಾಮ ಬೀರುವ ಊತ ಮತ್ತು ನೋವಿನ ಉಬ್ಬುಗಳು ಉಂಟಾಗುತ್ತವೆ. ಕಳಪೆ ರಕ್ತಪರಿಚಲನೆ, ರಕ್ತನಾಳಗಳ ಸಂಕೋಚನ ಇರುವ ಜನರು ಚಿಲ್ಬ್ಲೇನ್ಸ್​ಗೆ ಒಳಗಾಗಬಹುದು. ಪೀಡಿತ ಪ್ರದೇಶ ನೋವಿನಿಂದ ಕೂಡಿರುತ್ತದೆ. ತುರಿಕೆ, ಊತ ಸಾಮಾನ್ಯ. ತೀವ್ರತರವಾದ ಪ್ರಕರಣಗಳಲ್ಲಿ, ಗುಳ್ಳೆಗಳು ಮತ್ತು ಹುಣ್ಣುಗಳು ಸಂಭವಿಸಬಹುದು. ಆದರೆ ಹೆಚ್ಚಿನ ಜನರಿಗೆ, ಈ ಸ್ಥಿತಿಯು ಒಂದರಿಂದ ಮೂರು ವಾರಗಳಲ್ಲಿ ಸ್ವಯಂಪ್ರೇರಿತವಾಗಿ ಪರಿಹರಿಸಲ್ಪಡುತ್ತದೆ. ಆದರೂ ಚರ್ಮರೋಗ ವೈದ್ಯರನ್ನು ಭೇಟಿ ಮಾಡುವುದು ಉತ್ತಮ.

ರೇನಾಡ್ಸ್:ಚಿಲ್‌ಬ್ಲೇನ್ಸ್‌ನಂತೆ, ರೇನಾಡ್‌ ಚರ್ಮದ ಸ್ಥಿತಿಯಾಗಿದೆ. ಶೀತಕ್ಕೆ ಒಡ್ಡಿಕೊಳ್ಳುವುದಕ್ಕೆ ಪ್ರತಿಕ್ರಿಯೆಯಾಗಿ ಬೆರಳುಗಳು ಮತ್ತು ಕಾಲ್ಬೆರಳುಗಳಲ್ಲಿನ ರಕ್ತನಾಳಗಳ ಗಮನಾರ್ಹ ಸಂಕೋಚನದಿಂದ ನಿರೂಪಿಸಲ್ಪಟ್ಟಿದೆ. ಪೀಡಿತ ಪ್ರದೇಶ ನೋವಿನಿಂದ ಕೂಡಿರಬಹುದು ಮತ್ತು ತೀವ್ರವಾಗಿದ್ದಾಗ, ಹುಣ್ಣುಗಳು ಬೆಳೆಯಬಹುದು. ಶೀತ - ಹವಾಮಾನದ ಒಡ್ಡಿಕೆಯನ್ನು ತಪ್ಪಿಸುವುದು ಅವಶ್ಯಕ. ಕೈಗವಸುಗಳು ಮತ್ತು ಇನ್ಸುಲೇಟೆಡ್ ಪಾದರಕ್ಷೆಗಳನ್ನು ಧರಿಸುವುದು ಉತ್ತಮ.

ಉರ್ಟೇರಿಯಾ: ಉರ್ಟೇರಿಯಾವು ಸ್ವಯಂ ನಿರೋಧಕ ಪ್ರತಿಕ್ರಿಯೆಯಿಂದ ಪ್ರಚೋದಿಸಲ್ಪಡುತ್ತದೆ ಎಂದು ನಂಬಲಾದ ಚರ್ಮದ ದದ್ದು. ಇದು ಹಿಸ್ಟಮೈನ್ ಸೇರಿದಂತೆ ಉರಿಯೂತದ ಅಣುಗಳ ಬಿಡುಗಡೆಗೆ ಕಾರಣವಾಗುತ್ತದೆ. ಚರ್ಮ ಕೆಂಪಾಗುವುದು, ತುರಿಕೆ ಮತ್ತು ಊದಿಕೊಂಡ ಲಕ್ಷಣ. ತಲೆನೋವು, ಶೀತ, ಉಸಿರಾಟದ ತೊಂದರೆ, ಕಿಬ್ಬೊಟ್ಟೆಯ ನೋವು ಮತ್ತು ಅತಿಸಾರ ಸೇರಿದಂತೆ ಇತರ ರೋಗಲಕ್ಷಣಗಳು ಏಕಾಏಕಿ ಕಾಣಿಸಿಕೊಳ್ಳುತ್ತದೆ.

ಕೋಲ್ಡ್ ಫ್ಯೂನಿಕ್ಯುಲೈಟಿಸ್: ಇದು ಶೀತಕ್ಕೆ ಒಡ್ಡಿಕೊಂಡ 12 ರಿಂದ 72 ಗಂಟೆಗಳ ನಂತರ ಚರ್ಮದ ಮೇಲೆ ಕೆಂಪು ಗಂಟುಗಳಂತೆ ಕಾಣಿಸಿಕೊಳ್ಳುವ ಸ್ಥಿತಿ. ಕೋಲ್ಡ್ ಫ್ಯೂನಿಕ್ಯುಲೈಟಿಸ್​ ಪ್ರಕರಣಗಳು ಮಕ್ಕಳಲ್ಲಿ ಮತ್ತು ವಯಸ್ಕರಲ್ಲಿ ಹೆಚ್ಚು. ಶೀತದಿಂದ ರಕ್ಷಣೆ ಪಡೆಯುವುದು ಪ್ರಾಥಮಿಕ ಚಿಕಿತ್ಸೆಯಾಗಿದೆ. ಬಳಿಕ ಚರ್ಮರೋಗ ವೈದ್ಯರನ್ನು ಭೇಟಿ ಮಾಡುವುದು ಉತ್ತಮ.

ಇದನ್ನೂ ಓದಿ:ತೂಕ ನಷ್ಟಕ್ಕಾಗಿ ಉಪವಾಸ ಮಾಡುವುದಕ್ಕಿಂತ ಕ್ಯಾಲೋರಿ ಕಡಿಮೆ ಮಾಡುವುದು ಉಪಯುಕ್ತ: ಅಧ್ಯಯನ

ABOUT THE AUTHOR

...view details